ಎನ್ ಭಾಸ್ಕರ ಆಚಾರ್ಯ ಅವರ ಸಾಮಾಜಿಕ ಕಾದಂಬರಿ ‘ವ್ಯವಸ್ಥೆ’. ತನ್ನ ಅಸ್ತಿತ್ವಕ್ಕಾಗಿ ಮಾನವ ತಾನೇ ನಿರ್ಮಿಸಿಕೊಂಡ 'ವ್ಯವಸ್ಥೆ' ಬರಬರುತ್ತಾ ಅರ್ಥ ಸಂಕುಚಿತಗೊಂಡು ಜನ-ಜನರನ್ನು ವರ್ಗೀಕರಿಸುವ ಒಂದು ಸಾಧನವಾಗಿ ನಿಂತದ್ದು ಮಾನವ ಜನಾಂಗೈದ ದುರಂತ ಪರಂಪರೆಯಲ್ಲಿ ಒಂದು. ಮೂಲತಃ ಪ್ರೇಮಜೀವಿಯಾದ ಮಾನವ ಈ ವ್ಯವಸ್ಥೆಯ ನಡುವೆ ತನ್ನೆಲ್ಲಾ ಹೃದಯ ಸಂಬಂಧವನ್ನು ಕಳೆದುಕೊಳ್ಳಬೇಕಾಗಿ ಬರುವುದೂ, ಜೊತೆಯಲ್ಲೇ ಅಸಹ್ಯ ವೇದನೆಯನ್ನು ಅನುಭವಿಸಬೇಕಾಗುವುದೂ ಅನಿವಾರ, ಅದನ್ನು ಮೀರ ಹೊರಟಾಗ ಇನ್ನೊಂದು ತೆರನಾದ ಮಾನಸಿಕ ಹಿಂಸೆಗೆ ಅವನು ಪಕ್ಕಾಗುವುದೂ ಸಹಜ. ಈ ಸತ್ವದ ವಸ್ತುವನ್ನೊಳಗೊಂಡ ಈ ಕೃತಿಯಲ್ಲಿ ಅದಕ್ಕೆ ಪೂರಕವಾದ ವ್ಯಕ್ತಿಗಳನ್ನು ಕಾಣುತ್ತೇವೆ. ಮಠದ ಬಂದಆಕೆಯಂತಹ ಶಕ್ತಿಗಳನ್ನು ಹತೋಣಯಲ್ಲಡುವುದು ಅಶಕ್ಯವೆನಿಸಿದಾಗ ತನ್ನ ಅಸ್ತಿತ್ವವನ್ನು ಸಾದರಪಡಿಸಲು ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಕ್ರೈಸ್ತ ತರುಣಿಯನ್ನು ಮತಾಂತರಗೊಳಿಸಿ ಪ್ರಗತಿಶೀಲರಿಂದ ಶಹಬಾಸ್‌ಗಿರಿ ಪಡೆದರೂ ವ್ಯವಸ್ಥೆಯ ಕಬಂಧಬಾಹುವಿಗೆ ಸಿಲುಕಿ ಏನೂ ಆಗದೆ ಹೋಗುವ ಸ್ವಾಮಿಗಳು - ಶುದ್ಧಾಂತಃಕರಣದಿಂದ ಪ್ರೀತಿಸಿದ್ದೂ, ವಿವಾಹಬಂಧಕ್ಕೆ ಜಾತಿ ಅಡ್ಡ ಬಂದಾಗ ತಾನು ಕ್ರೈಸ್ತನಾಗಲು ಇಚ್ಛಿಸದ ಮಚ್ಚಿದವಳನ್ನು ತನ್ನ ಧರ್ಮಕ್ಕೆ ಪರಿವರ್ತಿಸಿಕೊಂಡರೂ ಅದಕ್ಕೆ ಒಗ್ಗದ ತನ್ನವರ ಬಗ್ಗೆ ಹೇಸಿಗೆ ಪಟ್ಟುಕೊಂಡು ಮೂಕವಾಗಿ ಸಂಕಟವನ್ನನುಭವಿಸುವ ನಾಯಕ-ಮಟ್ಟದವನಿಗಾಗಿ ಧರ್ಮ ಬಿಟ್ಟು ಬರುವುದಕ್ಕೆ ಮನಸ್ಪೂಪ್ಪದ್ದಿದ್ದರೂ ಅದನ್ನು ಸಾಧಿಸಿ ಕೈ ಹಿಡಿದಾಹನಿಗೆ ಧೈರ್ಯ ಹೇಳುವ ನಾಯಕಿ~ ಸರಕಾಲಿ ಮಡಿಕಲ್ ಕಾಲೇಜು, ಆಸ್ಪತ್ರೆ ಇವುಗಳ ವ್ಯವಸ್ಥೆಗೆ ಬೆಳಕು ಚೆಲ್ಲುವ ವಾಸ್ತವ ಚಿತ್ರಣ – ಇವೆಲ್ಲದರ ನಿರೂಪಣೆ 'ವ್ಯವಸ್ಥೆ' ಎಂಬುದು ಕೃತಿಯ ಬೆನ್ನುಡಿಯಲ್ಲಿನ ಮಾತುಗಳು
ಭಾಸ್ಕರ್ ಆಚಾರ್ಯ ಎನ್ ಅವರು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ 1954 ಫೆಬ್ರವರಿ 01ರಂದು ಜನಿಸಿದರು. ಆರ್ಚಿ ಅವರ ಕಾವ್ಯನಾಮ. ತಂದೆಯ ಸ್ಮರಣಾರ್ಥ ಡಾ. ಎನ್. ಆರ್. ಆಚಾರ್ಯ ಸ್ಮಾರಕ ಆಸ್ಪತ್ರೆಯನ್ನು 1983ರಲ್ಲಿ ನಿರ್ಮಿಸಿದ್ದಾರೆ. ಕೋಟೇಶ್ವರ ರೋಟರಿ ಸಂಸ್ಥೆಯ ಪ್ರಾರಂಭಿಕ ಸದಸ್ಯರಾಗಿದ್ದರು. ಸುವರ್ಣ ಮಹೋತ್ಸವ ಸಮಿತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ಗೌರವಾಧ್ಯಕ್ಷ ಹಾಗೂ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದರು. ‘ದ್ವಂದ್ವ, ವ್ಯವಸ್ಥೆ, ಅಭ್ಯಾಸ, ಪ್ರಯೋಗ, ಪರಿಣಾಮ, ಹೊಸ ಹಾದಿಯಲ್ಲಿ, ಆರ್ಚಿ ಅಂಕಣ’ ಅವರ ಮುಖ್ಯ ಕೃತಿಗಳು. ಪ್ರತಿ ವರ್ಷ ಬೆಂಗಳೂರಿನ ಗೆಳೆಯರ ಬಳಗದ ಸಹಯೋಗದೊಡನೆ ಸಾಹಿತ್ಯಕ ಸ್ಪರ್ಧೆ, ...
READ MORE