ಮಕ್ಕಳ ಮನಸ್ಸು ಸದಾ ಲವಲವಿಕೆ, ಒಂದಿಲ್ಲೊಂದು ಹುಡುಕಾಟ, ಸುತ್ತಮುತ್ತಲಿನ ಬಗ್ಗೆ ಕುತೂಹಲ, ಹೊಸತನ್ನು ಅನ್ವೇಷಿಸುವ ಭಾವ ಹಾಗೂ ತುಡಿತವಿರುತ್ತದೆ. ‘ಮಕ್ಕಳು ದೇವರಿಗೆ ಸಮಾನ’ ಎನ್ನುವುದು ಈ ಕಾರಣದಿಂದಲೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ಅರಿತು, ಅವರ ಭಾಷಾ ಶೈಲಿಗೆ ಇಳಿದಿದ್ದಾರೆ ಲೇಖಕಿ. ನೋನಿ ಮತ್ತು ಅಜ್ಜಿಯ ಒಡನಾಟ ಬಾಲ್ಯವನ್ನು ನೆನಪಿಸುತ್ತದೆ. ನೋನಿಯ ಧೈರ್ಯ, ನಿಸ್ಸಂಕೋಚ ಸ್ವಭಾವ ನಮ್ಮ ಮಕ್ಕಳಲ್ಲೂ ನೋಡುವಂತಹ ಅನನ್ಯ ಮಕ್ಕಳ ಕಾದಂಬರಿ ಇದಾಗಿದೆ.
ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ರೋಟರಿ ...
READ MORE