ರಜಪೂತರ ಇತಿಹಾಸವನ್ನು ಆಧರಿಸಿ ಗಳಗನಾಥರು ಬರೆದ ಐತಿಹಾಸಿಕ ಕಾದಂಬರಿ-ಶೌರ್ಯ ಸಂಜೀವನ ಅಥವಾ ಸತ್ವಸಾರ. ರಾಜ ಹಾಗೂ ಪ್ರಜೆಗಳೆಲ್ಲರೂ ಸೇರಿ ಒಮ್ಮನಸ್ಸಿನಿಂದ ಶತ್ರುವಿನೊದಿಗೆ ಕಾದಾಡಿ ಜಯಗಳಿಸಿದ ವಸ್ತುವನ್ನು ಹೊಂದಿದ ಕಾದಂಬರಿ ಇದು. ರಾಣಾಪ್ರತಾಪಸಿಂಹನ ಕಷ್ಟಕ್ಕೆ ಮೇವಾಡದ ಜನತೆ ನೆರವು ನೀಡಿದ್ದು ಹಾಗೂ ಮೇವಾಡದ ಜನತೆಯ ಕಷ್ಟಗಳಿಗೆ ರಾಣಾಪ್ರತಾಪ ಸಿಂಹನು ತನ್ನ ಪ್ರತ್ಯುಪಕಾರ ತೋರಿದ್ದು ಹಾಗೂ ರಾಣಾ ಪ್ರತಾಪಸಿಂಹನು ದೇಶಾಂತರ ಹೊರಟಾಗ ಆತನ ಮಂತ್ರಿ ಭಾಮಾನು, ತನ್ನ ಸರ್ವಸ್ವವನ್ನೂ ಸಮರ್ಪಿಸಿ ಸ್ವಾಮಿನಿಷ್ಠೆ ಮೆರೆದಿದ್ದು ಕಾದಂಬರಿಯ ಕುತೂಹಲವಾಗಿದೆ.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE