ಸುಧಾಮೂರ್ತಿ ಅವರ ‘ಡಾಲರ್ ಸೊಸೆ’ ಕಾದಂಬರಿಯು ಪ್ರಸ್ತುತ ಸಾಮಾಜಿಕ ಸಮಸ್ಯೆಯ ಕುರಿತ ಕಥಾವಸ್ತುವನ್ನು ಒಳಗೊಂಡಿದೆ. ಸರಳ ಶಬ್ದಗಳಿಂದ ಕೂಡಿರುವ ಬರಹ, ನಿರೂಪಣೆ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ. ವಿದೇಶಿ ವ್ಯಾಮೋಹ ಇಂದಿನ ಜನಾಂಗಕ್ಕೆ ಎಷ್ಟರ ಮಟ್ಟಿಗೆ ಮಾರುಹೋಗಿದೆ ಎಂದರೆ ನರ್ಸರಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ತಮ್ಮ ಧ್ಯೇಯ - ಗುರಿಗಳಲ್ಲಿ ಅಮೇರಿಕದ ಕನಸು ಕಾಣುತ್ತಾರೆ. ಬಡತನದಲ್ಲಿ ಜೀವಿಸಿ, ಉಳ್ಳವರ ತಾತ್ಸಾರಕ್ಕೆ ಗುರಿಯಾಗುವ ಗೌರಮ್ಮ, ತಮ್ಮ ಮಕ್ಕಳಲ್ಲಿ ಒಬ್ಬರನ್ನಾದರೂ ಅಮೇರಿಕಕ್ಕೆ ದುಡಿಯಲು ಕಳಿಸುತ್ತಾಳೆ. ಉದಾರಸ್ತೆ ಡಾಲರ್ ಸೊಸೆಯಿಂದಾಗಿ ದೇಶಿ ಸೊಸೆಯನ್ನು ಕಡೆಗಣಿಸಿದಾಗ ಏಳುವ ವೈರುಧ್ಯಗಳು, ಸಂಸ್ಕೃತಿಯ ಬದಲಾವಣೆ ಹೇಗೆ ಪಾಠ ಕಲಿಸುತ್ತದೆ ಎಂಬುದನ್ನು ಸುಧಾ ಮೂರ್ತಿ ಅವರು ಸೊಗಸಾಗಿ ನಿರೂಪಿಸಿದ್ದಾರೆ. ‘ನದಿಯ ಆಚೆಗಿರುವ ಹುಲ್ಲುಗಾವಲು ಸದಾ ಹಸಿರಂತೆ’ ಇಂತಹ ಹಲವು ಸಾಲುಗಳು ಕಾದಂಬರಿಯುದ್ದಕ್ಕೂ ಸಂಧಿಸಿ ಮುದ ನೀಡುತ್ತವೆ.
ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ರೋಟರಿ ...
READ MORE