ಕಾದಂಬರಿಯ ಕಥಾನಕ ಆಪ್ತವಾಗುವುದು ಅದರ ಭಾಷಿಕ ಕುಸುರಿಯಲ್ಲಿ. ಸ್ವತಃ ಕೊಂಚ ಹಿಂಜರಿಕೆಯ, ಗಟ್ಟಿದನಿಯಲ್ಲಿ ಮಾತಾಡದ, ಸೂಕ್ಷ್ಮ ಸಂವೇದನೆಯ ಮಂಜು ಕೋಡಿ ಉಗನೆಯವರ ಸಂಸ್ಕೃತಿ ಸೂಕ್ಷ್ಮ ಗ್ರಹಿಕೆ ಈ ಭಿನ್ನ ನೆಲೆಯನ್ನು ಸೃಷ್ಟಿಸಿಕೊಳ್ಳಲು ಸಹಾಯ ಮಾಡಿದೆ. ಬದಲಾದ ದಲಿತ ಲೋಕದ ಬಿಕ್ಕಟ್ಟು, ಆಶಯ ಮತ್ತು ರಾಜಕೀಯ ಜಿಜ್ಞಾಸೆಗಳನ್ನು ಆಳವಾಗಿ ಗಮನಿಸಿದ ಕೃತಿ ಇದಾಗಿದೆ. ಕಿರಿಚಾಡುವ ಪ್ರಗತಿ ಪರತೆಯ ಬದಲು ಬದುಕಿನ ಬವಣೆ, ಇಕ್ಕಟ್ಟುಗಳನ್ನು ತಣ್ಣಗಿನ ವಾಸ್ತವಿಕತೆಯಲ್ಲಿ ಇಡುವ ಬಗೆ ಹೆಚ್ಚು ಅಥೆಂಟಿಕ್ ಆಗಿ ಚಿತ್ರಿಸಿದ್ದಾರೆ ಕಾದಂಬರಿಕಾರರು.
.ಕತೆಗಾರ, ಕವಿ ಮಂಜು ಕೋಡಿಉಗನೆ ಮೂಲತಃ ಚಾಮರಾಜನಗರದವರು. ತಂದೆ ಎಂ. ಚನ್ನಂಜಯ್ಯ, ತಾಯಿ ನಾಗಮ್ಮ. ಕನ್ನಡ ಉಪನ್ಯಾಸಕರಾಗಿ ‘ಸರ್ಕಾರಿ ಪದವಿ ಪೂರ್ವ’ ಕಾಲೇಜುಗಳಲ್ಲಿ ಸೇವೆ. ತಮ್ಮ ನೆಲ ಮೂಲದ ಸಂಸ್ಕೃತಿಯನ್ನು ಚಿತ್ರಿಸುವ ‘ನೆಲದ ಜೀವ’ ಕತಾ ಸಂಕಲನ 2002ರಲ್ಲಿ ಪ್ರಕಟಣೆ ಕಂಡಿತು. ‘ಮಾರಿಕೋಳ’ ಅವರ ಕವನ ಸಂಕಲನ. ‘ಶೂದ್ರ ಸಂವಾದ’, ‘ನಾನು, ಮಲ್ಲಿಗೆ ಮತ್ತು ದೇವರು’, ‘ಬೆಟ್ಟ ಬೇಗೆ’ ಅವರ ಮತ್ತಿತರ ಕೃತಿಗಳು. ‘ಚಪ್ಪೋಡು’ ಅವರ ಇತ್ತಿಚಿನ ಕೃತಿ. ಅಲ್ಲದೆ ಅನುವಾದದಲ್ಲು ತಮ್ಮ ಚಾಪನ್ನು ಮೂಡಿಸಿರುವ ಮಂಜು ಅವರು ಕಬೀರರ ಪದ್ಯಗಳನ್ನು ‘ಕುರುಡಿಗೆ ಬೆಳಕು ನೆಪವಲ್ಲ’ ಎಂಬ ...
READ MORE