‘ದೇವರು ಹೊರಟನು’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಕಾದಂಬರಿಯಾಗಿದೆ. ಕೃತಿಯ ಮೂಲ ಲೇಖಕ ದಿ.ಬಾ. ಮೊಕಾಶಿ. ಈ ಕಾದಂಬರಿ ರಚಿಸಿ ಆರು ದಶಕಗಳು ಗತಿಸಿದರೂ ಇಂದಿಗೂ ಎಲ್ಲ ವಯಸ್ಸಿನವರಿಗೆ ಮೋಡಿ ಮಾಡುತ್ತದೆ. ಕಾರಣವೇನೆಂದರೆ ಲೇಖಕನು ಕಾದಂಬರಿಯ ಆರಂಭದಲ್ಲೇ 'ಯಾವುದಕ್ಕೆ ಆದಿಯಿಲ್ಲವೋ-ಅಂತ್ಯವಿಲ್ಲವೋ ಇದು ಅಂಥ ದೇವರ ಕಥೆಯಾಗಿದೆ' ಎನ್ನುತ್ತಾನೆ. ಸತ್ಯವೆಂದರೆ ದೇವರ ರೂಪವಾಗಿರುವ ಮನೆಯಲ್ಲಿಯ ಮುನ್ನೂರು ವರ್ಷಗಳ ನರಸಿಂಹನು, ಈ ಕಥೆಯ ಕೇವಲ ನಿಮಿತ್ತವಾಗಿದ್ದಾನೆ. ಆದರೆ ಈ ನರಸಿಂಹನ ಸಾಕಾರ ಮೂರ್ತಿಯ ಸುತ್ತಲೂ ಆಕಾರ ಪಡೆದ 'ಪಳಸಗಾಂವ' ಎಂಬ ಚಿಕ್ಕ ಊರಿನ ಒಂದು ದೊಡ್ಡ ಕುಟುಂಬದ ಭಾವ ಭಾವನೆಯ, ಒತ್ತಡ ತಲ್ಲಣಗಳ, ಆಕಾಂಕ್ಷೆ-ಉಪೇಕ್ಷೆಗಳ ಅನನ್ಯ ಚಿತ್ರಣವನ್ನು ಈ ಕಾದಂಬರಿಯ ಮೂಲಕ ಮೊಕಾಶಿಯವರು ಓದುಗರ ಮುಂದೆ ತಂದು ನಿಲ್ಲಿಸುತ್ತಾರೆ. ಅರವತ್ತರ ದಶಕದಲ್ಲಿ ನಗರೀಕರಣ ಆರಂಭಗೊಂಡು ಉದರ ನಿರ್ವಹಣೆಗಾಗಿ -ಉದ್ಯೋಗ ವ್ಯವಸಾಯಕ್ಕಾಗಿ ಪಳಸಗಾಂವದಂಥ ಹಲವು ಪ್ರಾತಿನಿಧಿಕ ಊರು, ಅಲ್ಲಿಯ ಹಲವು ಪೀಳಿಗೆ, ಕೂಡಿ ಬಾಳುವ ಅವಿಭಕ್ತ ಕುಟುಂಬವನ್ನು ಅಪ್ಪುಗೆಯಲ್ಲಿ ಹಿಡಿವ 'ನರಹರಿ-ನರಸಿಂಹ' ಕೇವಲ ಒಂದು ಕುಟುಂಬದವನಾಗಿರದೆ, ಸಂಪೂರ್ಣ ಗ್ರಾಮ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದ್ದಾನೆ. ಇಂಥ ಕುಟುಂಬದವರ ಅನಿವಾರ್ಯ ಚೆದುರುವಿಕೆ, ಅವರವರ ಶಕ್ತಿ ಸಾಮರ್ಥ್ಯಕ್ಕನುಗುಣವಾಗಿ ಆದ ಉತ್ಕರ್ಷ ಅಪಕರ್ಷ, ಈ ಏರಿಳಿತದಲ್ಲಿ ಗ್ರಾಮದ ಮನೆ- ಕುಟುಂಬವು ದಿಕ್ಕಾಪಾಲಾಗುವಾಗ' ನರಹರಿಯು ಯಾರೊಂದಿಗೆ ಹೋಗಬೇಕು, ಅಂದರೆ ಈ 'ಕುಲಾಚಾರ'ವನ್ನು ಮುಂದುವರಿಸಿಕೊಂಡು ಹೋಗುವವರು ಯಾರು-ಎನ್ನುವದೇ ಈ ಕಾದಂಬರಿಯ ಆಶಯದ್ರವ್ಯ. 'ದೇವರು ಮನುಷ್ಯ ಸಂಬಂಧ ವಿಚಿತ್ರವಾದುದು...ಹಲವು ಕಾರಣಗಳಿಂದ ಮನುಷ್ಯನಿಗೆ ದೇವರ ಅಗತ್ಯವಿದೆ... ಆದರೆ ದೇವರಿಗೆ ಮನುಷ್ಯನ ಅಗತ್ಯವಿದೆಯೇ- ಎನ್ನುವದು ಹೇಳಲು ಬರುವುದಲ್ಲ' -ಎಂಬ ಮನುಷ್ಯರ ಮತ್ತು ದೇವರ ಕಥೆಯಿದು!
ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ...
READ MORE