ಹರ್ಮೆನ್ ಹೆಸ್ ಅವರ ‘ಸಿದ್ಧಾರ್ಥ’ ಇಂಗ್ಲಿಷ್ ಕೃತಿಯನ್ನು ಸೊಂದಲಗೆರೆ ಲಕ್ಷ್ಮೀಪತಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ: ಇಲ್ಲಿ Soliloquy ಹೆಚ್ಚಾಗಿ ಬಳಕೆಯಾಗಿದೆ. ಇಡೀ ಕೃತಿಯ ಪೂರಾ Soliloquy (ಸ್ವಗತ ಸಂಭಾಷಣೆ) ತುಂಬಿ ತುಳುಕುತ್ತದೆ. ಇಂಗ್ಲಿಷ್ ಅನುವಾದದ ( ಮೂಲ- ಜರ್ಮನ್) ಈ ಕೃತಿ ಓದುಗರಿಗೆ ಪ್ರಾಸಬದ್ಧ ಕಾವ್ಯತ್ಮಕತೆಯಿಂದ ಕೂಡಿದ ಗದ್ಯಕಾವ್ಯವೆನಿಸುತ್ತದೆ. ಆ ದೃಷ್ಟಿಯಿಂದ ಈ ನೀಳತೆಯನ್ನು ಆದಷ್ಟೂ ಶ್ರಮವಹಿಸಿ ಮೂಲರೂಪದ ಸನಿಹಕ್ಕೆ ತರಲು ಪ್ರಯತ್ನಿಸಿದ್ದೇನೆ. ಇದೊಂದು ಗದ್ಯ ಕವಿತೆ ಎಂದು ಸಹೃದಯ ಓದುಗರಿಗೆ ತೋಚಬಹುದು. ಈ ಕಾದಂಬರಿ ನನ್ನ ವಿದ್ಯಾರ್ಥಿಜೀವನದಲ್ಲಿ ಇದೇ ಹೆಸರಿನ ಸಿನಿಮಾ ಆಗಿ ಆಂಗ್ಲಭಾಷೆಯಲ್ಲಿ ಬಂದಿತ್ತು. ಕಾರ್ನಡ್ ರೂಕ್ಸ್ ಎಂಬ ಹೆಸರಾಂತ ನಿರ್ದೇಶಕ ಈ ಸಿನಿಮಾ ನಿರ್ದೇಶಿಸಿದ್ದ. ಬಾಲಿವುಡ್‌ನ ಅಂದಿನ ಖ್ಯಾತ ನಟ ಶಶಿಕಪೂರ್ ಜೊತೆಗೆ ಅಂದು ಮಿಸ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಸುಂದರ ಅಭಿನೇತ್ರಿ ಸಿಮಿಗೆರೆವಾಲ್ ಕಮಲಳ ಪಾತ್ರದಲ್ಲಿ ಮೈಚಳಿ ಬಿಟ್ಟು ನಟಿಸಿದ್ದಳು. '70’ರ ದಶಕದಲ್ಲಿ ಈ ಚಿತ್ರ ದೇಶದುದ್ದಕ್ಕೂ ಸಂಚಲನ ಉಂಟುಮಾಡಿತ್ತು ಎಂಬುವುದನ್ನು ಈ ಪುಸ್ತಕದಲ್ಲಿ ತಿಳಿಸುತ್ತದೆ.
ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...
READ MORE