‘ಮಹಾವೀರ ಮಡಿವಾಳ ಮಾಚಿದೇವ’ ಕೃತಿಯು ಜಿ.ವಿ ಸಂಗಮೇಶ್ವರ ಅವರ ಐತಿಹಾಸಿಕ ಕಾದಂಬರಿಯಾಗಿದೆ. 12ನೇ ಶತಮಾನದಲ್ಲಿ ಜನರು ಅಸಮಾನತೆಯಿಂದ ಬೆಂದಿದ್ದ ಸಮಯದಲ್ಲಿ ಸಮಾಜಕ್ಕೆ, ದೀನದುರ್ಬಲರ ಬದುಕಿನ ಏಳಿಗೆಗಾಗಿ ಶ್ರಮಿಸಿ ಮಹಾಕ್ರಾಂತಿಯನ್ನೇ ಉಂಟುಮಾಡಿದ ಕಾಯಕಯೋಗಿವರೇಣ್ಯ ಎನ್ನುವುದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಅರಿವೇ ಗುರುವಾಗಿ ಅವತರಿಸಿದ ಈ ಮಹಾಪುರುಷ ಮಡಿವಾಳ ಮಾಚಿದೇವನನ್ನು ಅಲ್ಲಮಪ್ರಭು ಅವರು ‘ಗುಹೇಶ್ವರನ ಶರಣ ಮಡಿವಾಳ ಮಾಚಿತಂದೆ’ ಎಂದೂ ಕರೆದಿದ್ದಾರೆ ಎನ್ನುತ್ತಾರೆ ಲೇಖಕ. ಬಸವಣ್ಣ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಸೊನ್ನಲಿಗ ಸಿದ್ದರಾಮ, ಚನ್ನ ಬಸವಣ್ಣ, ಮರುಳು ಶಂಕರದೇವ ಸೇರಿದಂತೆ ಹತ್ತಾರು ಶರಣರಿಂದಲೇ ಹೊಗಳಲ್ಪಟ್ಟ ಮಾಚಿದೇವವನ್ನು ಇಲ್ಲಿ ಲೇಖಕರು ಭಿನ್ನವಾಗಿ ಬಿಂಬಿಸಿದ್ದಾರೆ. ಅವರ ಬಾಲ್ಯದ ಬದುಕು, ಕಲ್ಯಾಣ ಕ್ರಾಂತಿ, ಆಧ್ಯಾತ್ಮದಲ್ಲಿ ಬದುಕಿನ ಬಗ್ಗೆ ಏನು ಹೇಳಿದ್ದರು? ಮಾಚಿದೇವರ ಕಾಯಕ ನಿಷ್ಠೆ ಹೇಗಿತ್ತು?, ಅವರು ಅನುಭವ ಮಂಟಪಕ್ಕೆ ಬಂದ ಪರಿ, ಅಲ್ಲಿ ನಡೆದಿದ್ದೇನು? ಇವೆಲ್ಲವುಗಳನ್ನು ಈ ಕೃತಿಯು ಒಳಗೊಂಡಿದೆ.
ಲೇಖಕ ಜಿ.ವಿ ಸಂಗಮೇಶ್ವರ ಅವರು ಮೂಲತಃ ಭದ್ರಾವತಿಯವರು. ಅವರು ರಂಗಕರ್ಮಿ ಹಾಗೂ ಹಿರಿಯ ಸಾಹಿತಿಗಳು. ಭದ್ರಾವತಿಯ ಉಕ್ಕಿನ ಕಾರ್ಖಾನೆಯಲ್ಲಿ 36 ವರ್ಷ ಕಾಲ ಕಾರ್ಯನಿರ್ವಹಿಸಿದ್ದಾರೆ. ಕೃತಿಗಳು: ಕಬ್ಬಿಣದ ಕತೆ ವ್ಯಥೆ ,ಮಹಾವೀರ ಮಡಿವಾಳ ಮಾಚಿದೇವ ...
READ MORE