'ಒಡಕು ದೋಣಿ ಹಂಸಕ್ಷೀರ' ಆರತಿ ವೆಂಕಟೇಶ್ ಅವರ ಕಾದಂಬರಿಯಾಗಿದೆ. ದಾಂಪತ್ಯ ಜೀವನವೆಂಬುದು ನೀರಿನಲ್ಲಿ ಸಾಗುವ ಒಂದು ದೋಣಿಯಂತೆ, ಆ ದೋಣಿಗೆ ಸಣ್ಣ ಬಿರುಕು ಮೂಡಿದರೂ ಯಾವ ಸಮಯದಲ್ಲಿ ಅದು ತಲೆಕೆಳಕಾಗುವುದೋ ಹೇಳಲಾಗದು. ಶ್ರೀಮಂತಿಕೆಗೆ ಮಾರುಹೋಗುವವರು ನಮ್ಮಲ್ಲಿ ಕಡಿಮೆ ಇಲ್ಲ. ಸಿರಿವಂತಿಕೆಯ ಮುಸುಕಿನಲ್ಲಿ ಅನೇಕ ಹುಳುಕು. ಕೊರತೆಗಳು ಮುಚ್ಚಿಹೋಗುತ್ತವೆ. ಆಧುನಿಕ ಸಮಾಜದಲ್ಲಿ ಗಂಡು ಹೆಣ್ಣಿನ ಸಮಾನತೆಯ ಸೋಗಿನಲ್ಲಿ ನಡೆಯುವ ಕೆಲವು ಸತ್ಯ ಸಂಗತಿಗಳನ್ನು ನನ್ನ ‘ಒಡಕು ದೋಣಿ’ ಕಾದಂಬರಿಯಲ್ಲಿ ಚಿತ್ರಿಸಿದ್ದೇನೆ. ಇದರಲ್ಲಿ ಸಣ್ಣಪುಟ್ಟ ಪಾತ್ರಗಳು ಕಾಲ್ಪನಿಕವಾದರೂ ಈ ಕಾದಂಬರಿ ಸತ್ಯ ಘಟನೆಗಳ ಮೇಲೆ ಆಧರಿತವಾಗಿದೆ. ‘ಹಂಸಕ್ಷೀರ’ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ನೈಜ ಘಟನೆಗಳ ಸುತ್ತ ಹೆಣೆದ ನೀಳ್ಗತೆ. ಇದರಲ್ಲಿ ಬರುವ ಪಾತ್ರಗಳ ಚಿತ್ರಣ ವಾಸ್ತವಿಕತೆಗೆ ತೀರ ಹತ್ತಿರವಾಗಿದೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE