‘ಬಾಳಪಯಣ’ ಎ. ಸರಸಮ್ಮನವರ ಕಾದಂಬರಿಯಾಗಿದೆ. ಇದು ಸತ್ಯ ಘಟನೆಯನ್ನು ಒಳಗೊಂಡಿದೆ. ಡಾ. ಎಂ. ಎನ್. ರಘು ಅವರ ಮುನ್ನುಡಿ ಬರಹವಿದೆ. ಇಂದು ಆಧುನಿಕ ಶಿಕ್ಷಿತರು ತಾನೂ ತನ್ನ ಮಡದಿ ಮಕ್ಕಳೂ ಇಷ್ಟೇ ಸಾಕು, ತನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ತಂದೆ ತಾಯಿ ಅವರನ್ನು ಬೆಳೆಸಿದ ಅಜ್ಜ ಅಜ್ಜಿ ನಮಗೆ ಬೇಡವಾಗಿ ಅನಾಥರಾಗಿ ಆಶ್ರಮಗಳಲ್ಲಿ ಜೀವನ ಕಳೆದು ಅಬಲರಾಗಿ ನೋವಿನ ದಿನಗಳನ್ನು ಉಣ್ಣುತ್ತಿದ್ದಾರೆ. ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗ ತೊಡಗಿ ಆರ್ಥಿಕ ಅಸಮಾನತೆಗೆ ಕಾರಣವಾಗಿ ಜನರನ್ನು ಸಂಪತ್ತಿನ ಹಿನ್ನಲೆಯಲ್ಲಿ ಗುರ್ತಿಸಲಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಕವಯಿತ್ರಿಯೂ ಎಲ್ಲಾ ಬಗೆಯ ಸಮುದಾಯಗಳಿಗೆ ಮಾನವೀಯ ಪ್ರಜ್ಞೆಯನ್ನುಂಟು ಮಾಡುವಂತಹ ಮತ್ತು ಬಡವರಾದರೂ ಚಿಂತೆಯಿಲ್ಲ. ನಾವೂ ಸಹಾಯ ಮತ್ತು ಸಹಕಾರ ನೀಡಬಹುದು ಅದರಲ್ಲಿ ಸಂತೋಷವನ್ನು ಕಾಣಬಹುದು ಎಂಬ ಅದ್ಭುತ ಸಂದೇಶವನ್ನು ನೀಡುವ ನಿಟ್ಟಿನಲ್ಲಿ "ಬಾಳಪಯಣ" ಕಾದಂಬರಿಯು ಮೂಡಿಬಂದಿದೆ. ಸಮಾಜದಲ್ಲಿನ ಜನರ ದುಖಃಗಳಿಗೂ ನಮಗೂ ಸಂಬಂಧವಿಲ್ಲ. ಅವರವರ ಹಣೆಬರಹ ಅವರವರ ಕರ್ಮ ಎಂಬ ಉದಾಸೀನತೆಯಿಂದ ನಾನು ಸುಖವಾಗಿದ್ದರೆ ಸಾಕು ಎಂಬ ಭಾವನೆಯ ಭ್ರಮಾಲೋಕದಲ್ಲಿರುವ ಜನರಿಗೆ ಕಣ್ತೆರೆಸುವ ನಿಟ್ಟಿನಲ್ಲಿ ಈ ಕಾದಂಬರಿಯು ಅತ್ಯಂತ ಮುಖ್ಯವಾಗಿದೆ. ಕ್ರೂರ ಮನಸ್ಥಿತಿಗಳ ಮನುಷ್ಯರಿಗೆ ಪುನರ್ ಜನ್ಮವನ್ನು ನೀಡುವ ನಿಟ್ಟಿನಲ್ಲಿ ಕಾದಂಬರಿ ಬಡವರು ಬಡವರ ಬಗ್ಗೆ ಹೇಗೆ ಪ್ರೀತಿ ಮಮಕಾರಗಳನ್ನು ಮತ್ತು ಕಷ್ಟಗಳಿಗೆ ಹೇಗೆ ಸ್ಪಂದಿಸಬಹುದೆಂಬ ಬಹು ದೊಡ್ಡ ಪಾಠವನ್ನು ಪ್ರತಿಯೊಬ್ಬರಿಗೂ ನೀಡುತ್ತದೆ ಈ ಬಾಳಪಯಣ ಕಾದಂಬರಿ. ವಿನಮ್ರವಾದ ನಮಸ್ಕಾರಗಳೊಂದಿಗೆ - ಡಾ. ಎಂ. ಎನ್. ರಘು
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE