ಭಾರತೀಸುತ (ಶಾನಭಾಗ ರಾಮಯ್ಯ ನಾರಾಯಣರಾವ್) ಅವರು ಬರೆದ ಕಾದಂಬರಿ-ಅಮಾತ್ಯ ನಂದಿನಿ. ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಚಂದ್ರಹಾಸನ ಉಪಾಖ್ಯಾನಗಳಿವೆ. ಈ ಕೃತಿಯಲ್ಲಿ ಆ ಉಪಾಖ್ಯಾನಗಳಿಗಿಂತ ವಿಭಿನ್ನವಾಗಿ ವಿಷಯ ವಸ್ತುವನ್ನು ಹೊಂದಿದ್ದು, ಪೌರಾಣಿಕವೇ ಆಗಿದೆ. ಆದರೆ, ಅಮಾನುಷ ಕಥೆಯನ್ನು ಹೊಂದಿದೆ. ಚಂದ್ರಹಾಸ, ಚಂಪೆ, ವಿಷಯಾಕುಮಾರಿ, ರಾಜನಂದಿನಿ, ಅಮಾತ್ಯ ನಂದಿನಿ ಹೀಗೆ ಪಾತ್ರಗಳು ಒಟ್ಟು ಕಥೆಗೆ ಪೂರಕವಾಗಿ, ಕಥೆಯ ಸಾರವನ್ನು ಹೆಚ್ಚಿಸಿವೆ.
ಕೊಡಗು ಜಿಲ್ಲೆಯ ಬಿಳಿಗೇರಿಯಲ್ಲಿ ಜನಿಸಿದ ಶಾನಭಾಗ ರಾಮಯ್ಯ ನಾರಾಯಣರಾವ್ ಅವರು 'ಭಾರತೀಸುತ' ಎಂಬ ಹೆಸರಿನಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ರಾಷ್ಟ್ರೀಯ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದ್ದ ಅವರು ಬಿಡುಗಡೆಯ ನಂತರ ಕಾದಂಬರಿ- ಸಾಹಿತ್ಯ ರಚನೆ ಆರಂಭಿಸಿದರು. ಪತ್ರಿಕೋದ್ಯಮದಲ್ಲಿ ಆಸಕ್ತರಾಗಿದ್ದ ಅವರು ಕೆಲಕಾಲ 'ರಾಷ್ಟಬಂಧು' ಮತ್ತು 'ಗುರುವಾಣಿ' ಎಂಬ ಪತ್ರಿಕೆ ನಡೆಸಿದರು. ನಂತರ ಶಿಕ್ಷಕ ವೃತ್ತಿ ಆರಂಭಿಸಿದ ಅವರು ಕಥೆ-ಕಾದಂಬರಿಗಳ ರಚನೆಯಲ್ಲಿ ತೊಡಗಿಸಿಕೊಂಡರು. ಅವರು ರಚಿಸಿದ ’ಎಡಕಲ್ಲು ಗುಡ್ಡದ ಮೇಲೆ’, ’ಹುಲಿಯ ಹಾಲಿನ ಮೇವು’, ’ಗಿರಿಕನ್ನಿಕೆ’, ’ಬಯಲುದಾರಿ’ ಕಾದಂಬರಿಗಳು ಚಲಚಿತ್ರಗಳಾಗಿ ಯಶಸ್ವಿಯಾದವು. ಸಂತಾನಭಿಕ್ಷೆ ಇಳಿದು ಬಾ ತಾಯಿ, ಬೆಂಕಿಯ ಮಳೆ, ವಕ್ರ ರೇಖೆ, ಸಾಧನ ಕುಟೀರ, ಹುಲಿಬೋನು, ಗಿಳಿಯು ಪಂಜರದೊಳಿಲ್ಲ, ...
READ MORE