“ಬಾಡಿಗೆ ಮನೆ” ಲೇಖಕಿ ಎ. ಸರಸಮ್ಮ ಅವರ ಸಾಮಾಜಿಕ ಕಾದಂಬರಿ. ಇಲ್ಲಿ ಜೀವನ ಮೌಲ್ಯಗಳು, ಸಾಹಿತ್ಯದಲ್ಲಿ ಸೃಜನಶೀಲ ಅಭಿರುಚಿ, ಸಹೃದಯವನ್ನು ಬೆಳೆಸುವ ನಿಟ್ಟಿನಲ್ಲಿ ವಿಶಿಷ್ಟ ಪಾತ್ರ ವಹಿಸಿದೆ. ಹೆಣ್ಣು ಮಕ್ಕಳು ಬೆಳೆಯುವ ವಾತಾವರಣವು ಉತ್ತಮ ಸಂಸುತಿಯನ್ನು ಬಿಂಬಿಸುವಂತೆ ಇರಬೇಕು. ಹಾಗೂ ಒಳ್ಳೆಯ ಪರಿಸರದಲ್ಲಿ ಬೆಳೆಯುವಂತೆ ಎಚ್ಚರ ವಹಿಸಬೇಕು. ಉತ್ತಮ ವಾತಾವರಣ ಕಲ್ಪಿಸಿಕೊಡುವುದು ಹೆತ್ತವರ, ಪೋಷಕರ ಹಾಗೂ ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಹಾಗೂ ಒಳ್ಳೆಯ ಮೌಲ್ಯಗಳನ್ನೊಳಗೊಂಡ ಸ್ನೇಹಿತರ ಸಹವಾಸವೂ ತುಂಬಾ ಮುಖ್ಯವಾಗಿರುತ್ತದೆ. ಧೈರ್ಯ, ಸಾಹಸಗಳು ಚಿಕ್ಕಂದಿನಿಂದಲೇ ಮೈಗೂಡಿಸಿಕೊಳ್ಳುವುದು ಅತ್ಯವಶ್ಯಕ. ಹೆಣ್ಣು ತನ್ನ ಕುಟುಂಬ, ಸಮಾಜ ಹಾಗೂ ಜಗದ ಕಣ್ಣಾಗಿ ಬಾಳುವಳು. ಇಂತವಳ ಗುಣನಡತೆಗಳಲ್ಲಿ ವ್ಯತ್ಯಾಸವಾದರೆ ಆ ನೋವಿನ ಬಿಸಿಗೆ ಗುರಿಯಾಗುವುದೆಷ್ಟೋ ಕುಟುಂಬಗಳು ಹಾಗೂ ವ್ಯಕ್ತಿಗಳು. ನದಿಯು ಹುಟ್ಟಿ ಸಾಗರದ ಕಡೆಗೆ ಹರಿಯುವಂತೆ, ಹೆಣ್ಣು ತಾನು ಹುಟ್ಟಿ ಬೆಳೆದ ಮನೆಯನ್ನು ತೊರೆದು ಬೇರೊಂದು ಮನೆ ಬೆಳಗಲು ಸಾಗುತ್ತಾಳೆ. ಹೀಗಾಗಿ ಅವಳು ಗಂಗೆಯಷ್ಟು ಪರಿಶುದ್ಧಳಾಗಿರಬೇಕು. ಉತ್ತಮ ಮೌಲ್ಯಗಳನ್ನು ಹೊಂದಿದವಳಾಗಿರಬೇಕು. ಆಗ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತಾಗುತ್ತದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE