‘ಅಭಿಶಾಪ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಇದು ಕೀಳರಿಮೆ ಇರುವಂತಹ ವ್ಯಕ್ತಿಯ ಕುರಿತ ಕುತೂಹಲಕಾರಿ ಮನೋವೈಜ್ಞಾನಿಕ ಕಾದಂಬರಿ. ಈಗಾಗಲೇ ಮೂರು ಮುದ್ರಣಗಳನ್ನು ಕಂಡಿದೆ. ನಾಗರಾಜ ಚಿಕ್ಕಂದಿನಿಂದಲೂ ತನ್ನ ಬಗಗೆ ತಾನೇ ಅನುಮಾನ ಪಡುತ್ತಾ ಯಾವ ಕೆಲಸವೂ ತನ್ನಿಂದ ಆಗದು ಎಂದುಕೊಂಡರೂ ಮತ್ತೆ ಮತ್ತೆ ಎಲ್ಲರನ್ನೂ ಮೆಚ್ಚಿಸಲು ಕೆಲಸ ಮಾಡಲು ಹೋಗಿ ಪೇಚಿಗೆ ಸಿಕ್ಕಿಕೊಳ್ಳುತ್ತಾನೆ. ಅಪಕ್ವ ವ್ಯಕ್ತಿತ್ವದ ನಾಗರಾಜ ತನ್ನ ಕೀಳರಿಮೆಯನ್ನು ಹತ್ತಿಕ್ಕಲು ವಿಫಲ ಪ್ರಯತ್ನ ಮಾಡುವುದನ್ನು ಈ ಕಾದಂಬರಿಯಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಕಾಲಾನಂತರ ಮನೆಯವರ ಬಲವಂತಕ್ಕೆ ಸಿಕ್ಕು ಗೌರಿಯೊಂದಿಗೆ ಮದುವೆಯೂ ಆಗುತ್ತದೆ. ಸಂಸಾರದಲ್ಲಿಯೂ ಅವನ ಕೀಳರಿಮೆ ಮುಂದುವರಿಯುತ್ತದೆ. ಹಾಗಾದರೆ ನಾಗರಾಜನ ಬದುಕು ಬದಲಾಗಲೇ ಇಲ್ಲವೇ. ಅವನು ಜೀವನದಲ್ಲಿ ಗೆದ್ದನೇ ಸೋತನೇ ಎನ್ನುವ ಕುತೂಹಲಕಾರಿ ಸಂಗತಿಗಳನ್ನು ಕಾದಂಬರಿ ಓದಿಯೇ ಅರಿಯಬೇಕು. ಸೊಗಸಾದ ನಿರೂಪಣಾ ಶೈಲಿ ಇರುವ ಕೃತಿ ಅಭಿಶಾಪ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE