ಪಟ್ಟಣವೊಂದರಲ್ಲಿ ಜೊತೆಯಾಗಿದ್ದ ಗೆಳೆಯರ ಜೀವನದ ಜಾಡನ್ನು ಹಿಡಿದು ಸಾಗುವ ಕಥೆಯೇ ಪಂಚಮುಖ. ಥೇಮ್ಸ್ ಹಾಗೂ ಕಾವೇರಿ ನದಿಗಳ ನಡುವೆ ಮೈತ್ರಿ ಶುರುವಾಗೋ ಕಥೆಯಿದು. ಎಂಬತ್ತರ ದಶಕದ ಕಥೆಯಾಗಿದ್ದು, ಅಂದಿನ ಬಾಲ್ಯದ ಆಟಗಳು, ಓದುವ ಮಾಧ್ಯಮಗಳ ನಡುವಿನ ಸಂಘರ್ಷ ಎಲ್ಲವನ್ನು ಲೇಖಕರು ಕಥೆಯಲ್ಲಿ ತಂದಿದ್ದಾರೆ. ಬಾಲ್ಯದ ಮುಗ್ಧತೆಯಿಂದ ಯೌವನದ ಮಾಂತ್ರಿಕತೆಯೆಡೆಗಿನ ಪಯಣದ ಬಗ್ಗೆ ವಿವರಿಸಿದ್ದಾರೆ.
ಮೂಲತಃ ತುಮಕೂರಿನವರಾದ ಡಾ. ಕೆ.ಬಿ. ಶ್ರೀಧರ್ ಅವರು ಜನಿಸಿದ್ದು 1976 ಏಪ್ರಿಲ್ 28ರಂದು. ತುಮಕೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬಳ್ಳಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪದವಿ ಪಡೆದರು. ನಿಮ್ಹಾನ್ಸ್ ಹಾಗೂ ಸೆಂಟ್‌ಜಾನ್ಸ್ ವೈದ್ಯಕೀಯ ಕಾಲೇಜುಗಳಲ್ಲಿ ಮನೋರೋಗ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಮನೋರೋಗ ತಜ್ಞರಾಗಿ ಸುಮಾರು ಹತ್ತು ವರ್ಷಗಳು ಕಾರ್ಯನಿರ್ವಹಿಸಿ ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಚಮುಖಿ ಇವರ ಚೊಚ್ಚಲ ಕಾದಂಬರಿ. ಈ ಕಾದಂಬರಿಗೆ 2016ನೇ ಸಾಲಿನ ಕನ್ನಡ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಬಹುಮಾನ ದೊರೆತಿದೆ. ಸುಪ್ತ ...
READ MORE