ಹೊಸ ನೀರು

Author : ಉದಯ್ ಕುಮಾರ್ ಹಬ್ಬು

Pages 150

₹ 75.00




Year of Publication: 2021
Published by: ವಿಜಯಲಕ್ಷ್ಮೀ ಪ್ರಕಾಶನ
Address: ಮೈಸೂರು
Phone: 7204148718

Synopsys

ಹಿರಿಯ ಲೇಖಕಿ ಉದಯ ಕುಮಾರ್ ಹಬ್ಬು ಅವರ ಕಾದಂಬರಿ ’ ಹೊಸ ನೀರು’. ಕನ್ನಡದ ಪ್ರಥಮ ಕಾದಂಬರಿಗಳಾದ ಇಂದಿರಾಬಾಯಿ' ಮತ್ತು 'ವಾಗ್ಗೇವಿ' ಕೃತಿಗಳು ಪ್ರಾರಂಭಿಸಿದ ಸುಧಾರಣಾವಾದಿ ಪರಂಪರೆಗೆ "ಹೊಸ ನೀರು" ಸೇರುತ್ತದೆ ಎನ್ನುತ್ತಾರೆ ಲೇಖಕರು. ಈ ಕೃತಿಯಲ್ಲಿ ಯಾವುದೇ ತರದ ನಾಯಕ-ನಾಯಕಿಯರಿಲ್ಲ. ಇಡೀ ಊರಿನ ಕಥೆಯನ್ನು, ಆ ಮೂಲಕ ಶ್ರೇಣೀಕೃತ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಕ್ರೌರ್ಯ ಶೋಷಣೆಗಳನ್ನು ನೇರವಾಗಿ ಬಯಲಿಗೆಳೆಯಲು ಈ ಕೃತಿ ಪ್ರಯತ್ನಿಸುತ್ತದೆ. ಕೃತಿಯಲ್ಲಿ ಬರುವ ಒಂದು ಮುಖ್ಯ ಘಟನೆಯೆಂದರೆ, ಆ ಊರಿನ (ಸಿಲಿಂಗಾಪುರದ) ಅಮ್ಮನವರ ಒಡವೆಗಳನ್ನು ಕದ್ದು ಮಾಡುವ ಪ್ರಸಂಗ, ಸಮಾಜದ ಎಲ್ಲ ವರ್ಗ ಪ್ರತಿನಿಧಿಗಳನ್ನು ಒಳಗೊಳ್ಳುವ ಈ ಘಟನೆ ಆ ಮೂಲಕ ಯತಿಗಳು, ರಾಜಕಾರಣಿಗಳೂ ಸೇರಿದಂತೆ ಸಮಾಜದ ಎಲ್ಲ ಮುಖಂಡರ ಅಧಃಪತನವನ್ನು ಚಿತ್ರಿಸಲು ಲೇಖಕರಿಗೆ ಅನುವು ಮಾಡಿಕೊಡುತ್ತದೆ. ಧಾರ್ಮಿಕ ಶೋಷಣೆಗೆ ಪರಿಹಾರ ಡಾ.ಆಂಬೇಡ್ಕರ್ ಸೂಚಿಸಿದಂತೆ, ಬೌದ್ಧಮತದಲ್ಲಿ ಮಾತ್ರ ಸಾಧ್ಯ ಎಂಬ ಸೂಚನೆಯೊಡನೆ ಕೃಷಿ ಕೊನೆಗೊಳ್ಳುತ್ತದೆ. 

About the Author

ಉದಯ್ ಕುಮಾರ್ ಹಬ್ಬು
(27 April 1951)

ಉದಯ್ ಕುಮಾರ್ ಹಬ್ಬು ಇಂಗ್ಲಿಷ್ ಪ್ರಾಧ್ಯಾಪಕ‌ರಾಗಿ, ಪ್ರಾಂಶುಪಾಲರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಲೇಖಕರಾಗಿ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿರುವ ಹಬ್ಬು ಅವರು ಅನ್ವೇಷಣೆ, ರಥೋತ್ಸವ ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥಾ ಸಂಕಲನಗಳಾದ  ಸಂಬಂಧಗಳು, ಕಣ್ಣುಗಳು, ಬಿಳಿ ಕಾಗೆ ಮತ್ತು ಇತರ ಕತೆಗಳು ಹಾಗೂ ಮುಸ್ಸಂಜೆಯ ಕತೆಗಳು ಪ್ರಕಟಿತಗೊಂಡಿದೆ. ಇದಲ್ಲದೇ ಕಪ್ಪುದೇವತೆ  , ತ್ಯಕ್ತ , ದ್ರೋಣ ಲವ್ಯ ,ಬಿಟ್ಟೆನೆಂದರೂ  ಬಿಡದಿ ಮಾಯೆ , ವಿದುರ ಪರ್ವ ಕಾದಂಬರಿಯನ್ನು ಬರೆದಿದ್ದಾರೆ. ಅಳಿದ ಮೇಲೆ,  ಕೊನೆಯ ಕಲ್ಲು, ದೇವನೂರು ಮಹಾ ದೇವರ ಕಥೆಗಳು ಮತ್ತು ಕಾದಂಬರಿಗಳು-ಅವಲೋಕನ,  ಪುಸ್ತಕ ಪ್ರೀತಿ, ಜಂಬು ಜೋಂಕಿಣಿ ಇವರ ವಿಮರ್ಶಾ ಪುಸ್ತಕಗಳು. ಮಕ್ಕಳ ಸಾಹಿತ್ಯ ರಚನೆಯಲ್ಲಿ ...

READ MORE

Related Books