ಕ್ಯಾನ್ಸರ್ ಕಥಾವಸ್ತುವನ್ನು ಹೊಂದಿರುವ ಕಾದಂಬರಿ-ಸು. ಕರ್ತೃ ಪ್ರಸನ್ನ ಸಂತೇಕಡೂರು. ಕ್ಯಾನ್ಸರ್ ಜಗತ್ತಿನ ಹೊಸ ಲೋಕ ಇಲ್ಲಿ ಅನಾವರಣಗೊಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಸ್. ದಿವಾಕರ್ ಅವರು “ಕಿರು ಕಾದಂಬರಿ ತನ್ನ ವಸ್ತುವಿನಿಂದ ಹೇಗೋ ಹಾಗೆ ತನ್ನ ನಿರೂಪಣಾ ವಿಧಾನದಿಂದಲೂ ಓದುಗರ ಸ್ಥಿರೀಕರಣ ಶಕ್ತಿಯನ್ನು ಪ್ರಚೋದಿಸುವಂತಿದೆ. ಇಲ್ಲಿರುವುದು ಒಂದು ಜೀವದ ಸುಖ ಸಂತೋಷ, ನೋವು, ಆಘಾತ, ಗುರಿ ಸಾಧನೆ ಮೊದಲಾದವುಗಳ ಪ್ರತಿಬಿಂಬವಷ್ಟೇ ಅಲ್ಲ, ಅವುಗಳ ವಿಮರ್ಶೆಯೂ ಆಗಿದೆ” ಎಂದು ಪ್ರಶಂಸಿಸಿದ್ದಾರೆ.
ಪ್ರಸನ್ನ ಸಂತೇಕಡೂರು, ಮೂಲತಃ ಶಿವಮೊಗ್ಗ ಸಮೀಪದ ಸಂತೇಕಡೂರಿನವರು. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು, ಸುಮಾರು ಹತ್ತು ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದರು. ಮೊದಲು ವರ್ಜಿನೀಯಾ ಸಂಸ್ಥಾನದ ರಿಚ್ಮಂಡ್ ನಗರದ ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ನಂತರ ಅಲ್ಲಿಯೇ ಹಂಟರ್ ಹೊಲ್ಮ್ ಮ್ಯಾಕ್ವಾಯಿರ್ ಸಂಶೋಧನಾ ಕೇಂದ್ರ ಮತ್ತು ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ವಿದೇಶಗಳಲ್ಲಿರುವ ಭಾರತೀಯ ಪ್ರತಿಭಾವಂತ ...
READ MORE