ಖ್ಯಾತ ಕಾದಂಬರಿಕಾರ ತ.ರಾ.,ಸು ಅವರು ರಚಿಸಿದ ರಕ್ತತರ್ಪಣ, ಪುರುಷಾವತಾರ ಮತ್ತು ಬಯಕೆಯ ಬಂದಿ-ಈ ಮೂರು ಕಾದಂಬರಿಗಳ ಸಂಯುಕ್ತ ಸಂಪುಟವಿದು. ಸ್ವಾತಂತ್ರ್ಯ ಚಳವಳಿಯ ಅನುಭವಗಳನ್ನು ರಕ್ತತರ್ಪಣ ಕಾದಂಬರಿಯಲ್ಲಿ ಚಿತ್ರಸಿದ್ದರೆ, ‘ಪುರುಷಾವತಾರ’ ಇವರ ಪ್ರಗತಿಶೀಲ ಕಾದಂಬರಿ. ಬಯಕೆಯ ಬಂದಿ ಸೇರಿದಂತೆ ಮೂರು ಕಿರು ಕಾದಂಬರಿಗಳನ್ನು ಒಂದೆಡೆ ನೀಡಿದ್ದು, ತರಾಸು ಅವರ ಕಾದಂಬರಿ ರಚನೆ, ವಿಚಾರ ಕ್ರಮಗಳ ಅಧ್ಯಯನಕ್ಕೆ ಈ ಕೃತಿ ಹತ್ತು ಹಲವು ಒಳಹೊಳವುಗಳನ್ನು ನೀಡುತ್ತದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE