‘ಭರತಕಲ್ಪ’ ಕೃತಿಯು ಆರ್. ಸುನಂದಮ್ಮ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; 'ಮಹಿಳೆಯರಿಗೆ ಮಹಿಳೆಯರದ್ದೇ ಆದ ಪುರಾಣಗಳಿಲ್ಲ. ಪುರುಷರು ನಿರ್ಮಿಸಿದ ಪುರಾಣಗಳಲ್ಲಿ ಮಹಿಳೆಯರು ಪುರುಷರ ಮೂಗಿನ ನೇರಕ್ಕೆ ರೂಪಿತರಾದವರಂತೆ ಕಂಡುಬರುತ್ತಾರೆ. ಅವರದೇ ಆದ ಸಂವೇದನೆಗಳಿರುವ, ಸ್ವತಂತ್ರ ಅಸ್ತಿತ್ವ ಇರುವ, ಮಹಿಳಾ ಪಾತ್ರಗಳು ಮತ್ತು ಅವರ ದೃಷ್ಟಿಕೋನಗಳು ಪರುಷ ನಿರ್ಮಿತ ಪುರಾಣಗಳಲ್ಲಿ ಕಾಣೆಯಾಗಿವೆ' ಎಂಬುದಾಗಿ ಸಿಮನ್ ದಿ ಬುವಾ ಹೇಳಿದ್ದಾರೆ. ಕನ್ನಡ ಮಾತ್ರವಲ್ಲ ಯಾವುದೇ ಭಾಷೆಯ ಸಾಹಿತ್ಯವನ್ನು ಅಭ್ಯಾಸ ಮಾಡುವ ಸ್ತ್ರೀವಾದಿ ಚಿಂತಕರಿಗೆ ಬುವಾರ ಮಾತು ಅಕ್ಷರಶಃ ನಿಜ ಎಂಬುದು ತಟ್ಟನೆ ಮನವರಿಕೆಯಾಗುತ್ತದೆ. ಇಂತಿರುವ ಪುರಾಣಗಳ ಕುರಿತು ಲೇಖಕಿಯರು ಏನನ್ನು ಹೇಳಿದ್ದಾರೆ ಎಂಬುದನ್ನು ಗಮನಿಸಿದರೆ, ಕನ್ನಡದ ಹಿರಿಯ ಲೇಖಕಿಯಾದ ಆರ್ ಕಲ್ಯಾಣಮ್ಮ ಅವರಿಂದ ತೊಡಗಿ, ಎಚ್. ವಿ. ಸಾವಿತ್ರಮ್ಮ, ನಳಿನಾ ಮೂರ್ತಿ, ಅನುಪಮಾ ನಿರಂಜನ, ವೈದೇಹಿ, ಎಂ. ಎಸ್.ವೇದಾ, ಎಸ್. ವಿ. ಪ್ರಭಾವತಿ ಮುಂತಾದ ಹಲವರು ಪುರಾಣ ಜಗತ್ತನ್ನು ಪರಿಶೀಲಿಸುವ, ವಿಶ್ಲೇಷಿಸುವ, ಪುನರ್ ಕಟ್ಟುವ ಕೆಲಸಗಳನ್ನು ತಮ್ಮ ಕಥೆ, ಕಾದಂಬರಿಗಳಲ್ಲಿ ಮಾಡಿದ್ದಾರೆ. ಇದರ ಫಲವಾಗಿ ಮಾಧವಿ, ಸೀತೆ, ಊರ್ಮಿಳೆ, ಕೌಸಲ್ಯ, ದೌಪದಿ, ಕುಂತಿ, ಅಹಲ್ಯ, ಶಕುಂತಲಾ, ಅಂಬೆ ಮುಂತಾದ ಹಲವು ಪುರಾಣ ಸ್ತ್ರೀಪಾತ್ರಗಳ ಮನೋಲೋಕ ಅನಾವರಣಗೊಂಡಿದೆ. ನವೋದಯದಲ್ಲಿ ಮಾನವತಾವಾದಿ ನೆಲೆಯಿಂದ ಪುರಾಣದ ಸ್ತ್ರೀಪಾತ್ರಗಳನ್ನು ಮರುಚಿತ್ರಿಸಿದ ಲೇಖಕರ ಕೃತಿಗಳಲ್ಲಿ ಈ ಪುರಾಣದ ಮಹಿಳೆಯರು ಉದಾತ್ತೀಕರಣಕ್ಕೆ ಒಳಗಾಗಿದ್ದಾರೆ; ಅಂಚಿನಿಂದ ಕೃತಿಯ ಕೇಂದ್ರದಲ್ಲಿ ಕಾಣಿಸುವಷ್ಟು ಪ್ರಖರವಾಗಿ ಒಡಮೂಡಿದ್ದಾರೆ. ಆದರೆ ಅವರೊಳಗೂ ಪುರುಷ ಪ್ರಧಾನ ಸಮಾಜದ ಸಿದ್ಧ ನಿಲುವುಗಳು, ನಂಬಿಕೆಗಳು, ದೃಷ್ಟಿಕೋನಗಳು ಸ್ತ್ರೀಪಾತ್ರಗಳ ಇರುವಿಕೆ, ಚಿಂತನೆ ಮತ್ತು ವ್ಯಕ್ತಿತ್ವವನ್ನು ರೂಪಿಸಿರುವುದನ್ನು ಮರೆಯುವಂತಿಲ್ಲ. ಆದರೆ ಮಹಿಳಾ ಲೋಕದೃಷ್ಟಿಯು ಪುರುಷರ ಲೋಕದೃಷ್ಟಿಗಿಂತ ಎಲ್ಲಿ, ಹೇಗೆ ಮತ್ತು ಯಾವ ನೆಲೆಗಳಲ್ಲಿ ಭಿನ್ನವೂ ಅನನ್ಯವೂ ಆಗಿವೆ ಎಂಬುದನ್ನು ಲೇಖಕಿಯರು ತಮ್ಮ ಕೃತಿಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಸಂವೇದನಾಶೀಲ ಸ್ತ್ರೀವಾದಿ ಲೇಖಕಿ ಪ್ರೊ.ಆರ್.ಸುನಂದಮ್ಮ ಅವರು ಮೂಲತಃ ಕೋಲಾರ ಜಿಲ್ಲೆಯ ವೆಂಕಟಾಪುರದವರು. ಕತೆ, ಕಾವ್ಯ, ಕಾದಂಬರಿ, ಸಂಶೋಧನಾ ಮತ್ತು ವೈಚಾರಿಕ ಲೇಖನಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ 2003ರಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಸೇರ್ಪಡೆಯಾದ ಅವರು, ಉಪನ್ಯಾಸಕಿಯಾಗಿ, ರೀಡರ್ ಆಗಿ, ಸಹ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಕನಕದಾಸ ಅಧ್ಯಯನ ಪೀಠದ ಸಂಯೋಜಕರಾಗಿ, ಎರಡು ಅವಧಿಗೆ ಆರ್ಥಿಕ ಅಧಿಕಾರಿಗಳಾಗಿ, ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ದೇಶದ ಮೊಟ್ಟಮೊದಲ ಮಹಿಳಾ ವಸ್ತು ...
READ MORE