ಕಾದಂಬರಿಕಾರ, ಭಾಷಾತಜ್ಞರೆನಿಸಿದ ಕೆ.ಟಿ ಗಟ್ಟಿ ಅವರ ಕಾದಂಬರಿ ’ಕೆಂಪು ಕಳವೆ’.
ಕೆಂಪು ಕಳವೆ ಒಂದು ಗ್ರಾಮದ ಅಂತರಾಳದಲ್ಲಿರುವ ಪುಟ್ಟ ವಿಶ್ವವನ್ನು ಪದರ ಪದರವಾಗಿ ಬಿಚ್ಚಿಡುವ ಕತೆಯಾಗಿದೆ. ಸೃಷ್ಟಿಯ ಆರಂಭವೋ ಎಂಬಂತೆ ಒಂದು ಬದುಕಿನ ಆರಂಭದ ವಿವರಗಳಿಂದ ತೊಡಗಿ ಆ ಬದುಕಿನ ಮುನ್ನಡೆಯ ಒಂದು ಹಂತದವರೆಗಿನ ಕತೆಯನ್ನು ’ಕೆಂಪು ಕಳವೆ’ ನೂರಾರು ದೃಶ್ಯಗಳಂತೆ, ನೂರಾರು ಚರಣಗಳ ಒಂದು ಹಾಡಿನಂತೆ ಓದುಗರಿಗೆ ಕಟ್ಟಿಕೊಡುತ್ತದೆ.
ಮಹತ್ತರವಾದ ಏರುಪೇರುಗಳಿಲ್ಲದ , ಸಹಜ ಪ್ರಕೃತಿಯೇ ಕಟ್ಟಿಕೊಟ್ಟಂತಿರುವ ಅಥವಾ ಪ್ರಕೃತಿಯನ್ನೇ ಗೂಡಾಗಿಸಿ ಒಂದು ಕುಟುಂಬ ಹೆಣೆದುಕೊಂಡ ಬದುಕಿನ ಚಿತ್ರಣವನ್ನು ಈ ಕೃತಿ ಬಿತ್ತರಿಸುತ್ತದೆ.
ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...
READ MORE