ಹುತ್ತ

Author : ಬಾಳಾಸಾಹೇಬ ಲೋಕಾಪುರ

Pages 182

₹ 75.00




Published by: ಲೋಹಿಯಾ ಪ್ರಕಾಶನ
Address: ಕಪ್ಪಗಲ್ಲು ರಸ್ತೆ, ಬಳ್ಳಾರಿ

Synopsys

ʼಹುತ್ತ' ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ. ಪ್ರಾಮಾಣಿಕ ಬದುಕಿನ ಸತ್ಯದ ಶೋಧ ಇಲ್ಲಿದ್ದು ಕಾದಂಬರಿ ಓದಿನಾಚೆ ಒಂದು ಜಿಜ್ಞಾಸೆಯಾಗಿ ಓದುಗನೊಳಗೆ ಬೆಳೆಯುವ ಕಸುವು ಹೊಂದಿದೆ. ಕಾದಂಬರಿ ಪ್ರಕಾರದ ಎಲ್ಲ ಅಂಶಗಳಿಗೂ ಸೂಕ್ತ ನ್ಯಾಯ ಸಲ್ಲಿಸಿರುವುದು ಕೂಡ ಗಮನಾರ್ಹವಾಗಿದೆ. ಇಲ್ಲಿನ ಭಾಷೆ, ವಿವರಗಳು ಕಟ್ಟಿಕೊಡುವ ಒಂದು ವಾತಾವರಣ, ಇವುಗಳಿಂದ ಅಲ್ಲಿನ ಬದುಕು ಜೀವಂತಗೊಳ್ಳುವ ಪರಿ ನಿಜಕ್ಕೂ ತುಂಬ ಸಹಜವಾಗಿ, ಲಾಲಿತ್ಯಪೂರ್ಣವಾಗಿ ಬಂದಿದೆ. ಇಲ್ಲಿನ ಭೀಮು ಮುತ್ಯಾ ಮತ್ತು ಕಲ್ಲಪ್ಪ ಹಲವಾರು ಕಾರಣಗಳಿಗೆ ಒಂದು ಬಗೆಯ ಸಂವಾದಿತ್ವ ಹೊಂದಿರುವ ಪಾತ್ರಗಳು. ಅದೇ ರೀತಿ, ರಾವಸಾಬ ಮತ್ತು ಜಿನ್ನಪ್ಪ; ಚಂಪಕವ್ವ ಮತ್ತು ಬುದ್ದವ್ವ. ಶಿವರುದ್ರ ತನ್ನ ದ್ವೇಷ, ಕ್ರೌರ್ಯ ಮತ್ತು ಒಳಸಂಚುಗಳ ಪ್ರತೀಕವಾಗಿ ನಿಂತರೆ ನಾಗಿಯ ಪಾತ್ರ ಸ್ತ್ರೀವ್ಯಾಮೋಹದ ಕೇಂದ್ರವಾಗಿದೆ. ಇದೇ ರೀತಿ, ಇಲ್ಲಿ ಗಾಂಧಿ ಮತ್ತು ಜೈನ ಧರ್ಮ ಎರಡು ಸಂವಾದೀ ನೆಲೆಗಟ್ಟುಗಳಾಗಿ ಕಾದಂಬರಿಯಲ್ಲಿ ಪಾತ್ರಗಳಾಗಿಯೇ ಸೇರಿಕೊಂಡಂತಿರುವುದು ಕೂಡ ಗಮನಾರ್ಹ. ಇಲ್ಲಿಯ ಸನ್ನಿವೇಶಗಳು ಬದುಕಿನ ಯಥಾವತ್ ಚಿತ್ರಣವೇ ಅನಿಸುವಷ್ಟು ಈ ಕಥಾನಕ ಸಹಜವಾಗಿದೆ.

 

About the Author

ಬಾಳಾಸಾಹೇಬ ಲೋಕಾಪುರ

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಶಿರಹಟ್ಟಿಯವರಾದ ಲೇಖಕ ಬಾಳಾಸಾಹೇಬ ಲೋಕಾಪುರ 1955ರಲ್ಲಿ ಜನಿಸಿದರು. ನವ್ಯೊತ್ತರ ಸಾಹಿತಿಗಳಾದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಭೂಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ‘ಆಧುನಿಕ ಕನ್ನಡ ಕಥನ ಸಾಹಿತ್ಯದಲ್ಲಿ ಜೈನ ಸಂವೇದನೆ’ ವಿಷಯದಲ್ಲಿ ಪಿಹೆಚ್ ಡಿ ಪಡೆದರು.  ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರಾದ ಇವರು ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ...

READ MORE

Related Books