ಸಂಪನ್ನ ವಿ. ಮುತಾಲಿಕರ ಚೊಚ್ಚಲ ಕಾದಂಬರಿ ಇದು. ತನ್ನ ವಿಶಿಷ್ಟ ಕಥಾ ವಸ್ತುವಿನಿಂದ ಓದುಗರ ಗಮನ ಸೆಳೆಯುತ್ತದೆ. ಸಾರಾಯಿ, ಕಳ್ಳಭಟ್ಟಿ ವ್ಯವಹಾರಗಳು, ಅಪನಂಬಿಕೆ, ಮೋಸ, ಪ್ರೀತಿ, ವ್ಯಾಮೋಹ, ಬಡಿದಾಟದ ಚಿತ್ರಣಗಳು ಉತ್ತಮ ನಿರೂಪಣಾ ಶೈಲಿಯಿಂದ ಕಾದಂಬರಿ ಸುಗಮವಾಗಿ ಓದಿಸಿಕೊಳ್ಳುತ್ತದೆ.
ಲೇಖಕ ಸಂಪನ್ನ ವಿಜಯರಾವ್ ಮುತಾಲಿಕ ಅವರು ಮೂಲತಃ ದಾವಣಗೆರೆಯವರು. ಇಂಜಿನಿಯರಿಂಗ್ ಓದುತ್ತಿರುವಾಗಲೇ ಸಂಗೀತ, ನಾಟಕ, ಏಕಪಾತ್ರಾಭಿನಯ, ಪ್ರಹಸನ, ಚರ್ಚಾಸ್ಪರ್ಧೆ -ಹೀಗೆ ಹಲವಾರು ರಾಜ್ಯಮಟ್ಟದ ಲಲಿತಕಲೆಗಳ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರೊ. ಚಂದಶೇಖರ ಪಾಟೀಲರು ಬರೆದ ‘ಕುಂಟಾ ಕುಂಟಾ ಕುರುವತ್ತಿ’ ನಾಟಕದ ನಿರ್ದೇಶನ ಮಾಡಿದ್ದು, ‘ನಾವ್ ಇರೋದ್ ಹೀಗೆ ಸ್ವಾಮಿ’ ಹಾಗೂ ‘ಇದೂ ಒಂದು ಸಮಸ್ಯೆಯೇ’ ಎಂಬ ನಾಟಕಗಳನ್ನೂ ರಚಿಸಿ, ನಿರ್ದೇಶಿಸಿದ್ದಾರೆ. ‘ಅಭಿಯಂತರಂಗ’ ಎಂಬ ಹವ್ಯಾಸಿ ನಾಟಕಾಸಕ್ತರ ಸಂಸ್ಥೆಯಲ್ಲಿ ಮುಖ್ಯಪಾತ್ರ ವಹಿಸಿ ‘ತದ್ರೂಪಿ’, ‘ಅಂತಿಗೊನೆ’, ‘ಈ ಮುಖದವರು’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ‘ಭರದ್ವಾಜ’ ಅವರ ಚೊಚ್ಚಲ ...
READ MORE