‘ಹಿಮಕಿನ್ನರಿ’ ಮಕ್ಕಳ ಕಾದಂಬರಿ. ಲೇಖಕಿ ಕಿರಣ್ ಪ್ರಸಾದ್. ಮನೆ ಸಮೀಪದ ಅಂಗಡಿಗೆ ಹೋಗಲೂ ಹಿಂದೇಟು ಹಾಕುತ್ತಿದ್ದ ಚಿನ್ಮಯ್ ಪುಕ್ಕಲನಾಗುತ್ತಾನೆಂದು ತಂದೆ ತಾಯಿ, ಆದರೆ ಚಿನ್ಮಯ್ ಹಿಮಾಲಯ ಚಾರಣಕ್ಕೆ ಹೋಗುತ್ತಾನೆ. ಅಲ್ಲಿ ಹಿಮಕಿನ್ನರಿ ಭೇಟಿಯಾದ ನಂತರ ಆತನ ಮುಂದೆ ಅದ್ಭುತ ಲೋಕ ತೆರೆದುಕೊಳ್ಳುತ್ತದೆ. ಕಳೆದುಹೋಗಿದ್ದ ಹಿಮಮಣಿಯನ್ನು ಹುಡುಕಲು ಚಿನ್ಮಯ್ ಹೇಗೆ ಸಹಾಯ ಮಾಡಿದ. ಆ ಹಿಮಮಣಿಯನ್ನು ಎಗರಿಸಿದ್ದ ಆ ಇಬ್ಬರು ಯಾರು? ಎಂಬುದು ಕಾದಂಬರಿಯ ಸ್ವಾರಸ್ಯ. ಕುತೂಹಲ ಕೆರಳಿಸುವ ಈ ವೈಜ್ಞಾನಿಕ ಕಾಲ್ಪನಿಕ ಈ ಕಿರು ಕೃತಿ ಐದು ಮುದ್ರಣ ಕಂಡಿದೆ.
ಕಾದಂಬರಿಗಾರ್ತಿ ಕಿರಣ್ ಪ್ರಸಾದ್ ರಾಜನಹಳ್ಳಿ ಅವರು 1966 ಜೂನ್ 20 ರಂದು ಚಿತ್ರದುರ್ಗದಲ್ಲಿ ಜನಿಸಿದರು. ’ನೀ ನಡೆವ ಹಾದಿಯಲ್ಲಿ’ (ಕಾದಂಬರಿ), ಮಕ್ಕಳ ಕಥಾಲೋಕ, ನಕ್ಷತ್ರಲೋಕದಲ್ಲಿ ನಚಿಕೇತ (ಶಿಶುಸಾಹಿತ್ಯ), ಹಿಮಕಿನ್ನರಿ, ಸರಿಸೃಪಗಳ ಜೀವನಚರಿತ್ರೆ, ಸೂರ್ಯ ಅಪಾರ್ಟ್‌ಮೆಂಟ್ (ಮಕ್ಕಳ ಪತ್ತೆದಾರಿ ಕಾದಂಬರಿ), ಅಮೆರಿಕಾದಲ್ಲಿ ಅಧ್ಯಯನದ ಅನುಭವ (ಪ್ರವಾಸಕಥನ), ಶಿಶುಪ್ರಾಸಗಳು, ಒಂಟಿ ನಕ್ಷತ್ರದ ನಾಡಿನಲ್ಲಿ, ಅಮ್ಮ ಏಕೆ ನಗಲಿಲ್ಲ (ಲೇಖನ ಸಂಗ್ರಹ). ಲೇಖಕರಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ, ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ಪ್ರಶಸ್ತಿಗಳು ಲಭಿಸಿವೆ. ...
READ MORE