ಜೀವನದಿ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 270

₹ 120.00




Year of Publication: 2013

Synopsys

ಅ.ನ.ಕೃ. ರವರ ಕಾದಂಬರಿಗಳ ಶೈಲಿ,ವಿನ್ಯಾಸ ಮತ್ತು ವಿಚಾರ ಪ್ರೌಢಿಮೆಯ ಬಗ್ಗೆ ಬರೆಯುವುದು ತುಂಬಾ ಜವಾಬ್ದಾರಿಯ ಕೆಲಸ. ಅವರ ಭಾಷಾ ಪಾಂಡಿತ್ಯ, ವಸ್ತು ವೈವಿಧ್ಯ, ಮತ್ತು ಶಬ್ದ ಭಂಡಾರಕ್ಕೆ ಮನಸೋಲ ದವರೇ ಇಲ್ಲ ಅನ್ನಬಹುದು. ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಮಾತಿನಂತೆ ಅವರು ಬರೆಯದಿರುವ ವಿಷಯ ವೇ ಇಲ್ಲ. ಇವರು ಕನ್ನಡ ಭಾಷೆಯ ಬೆಳವಣಿಗೆಗೆ ಶಕ್ತಿ ಮೀರಿ ದುಡಿದವರು ಮತ್ತು ಸಾಹಿತ್ಯ ಸೃಷ್ಟಿಗೆ ಅಗತ್ಯ ವಾದ ಪ್ರೋತ್ಸಾಹವಿಲ್ಲದ ಆ ಕಾಲದಲ್ಲೇ ಹೆಚ್ಚು ಕಾದಂಬರಿಗಳನ್ನು ಬರೆದ ಕಾದಂಬರಿ ಸಾಮ್ರಾಟರು. ತಾವರೆಕೆರೆಯ ಶ್ರೀಮಂತರಾದ, ಜಿಪುಣಾಗ್ರೇಸರ ನಂಜುಂಡಯ್ಯನವರ ಪತ್ನಿ ಧರ್ಮಭೀರು ಹಾಗೂ ಸಂಯಮದ ಮೂರ್ತಿ ಪಾರ್ವತಮ್ಮನವರು. ಇವರ ಇಬ್ಬರು ಗಂಡುಮಕ್ಕಳು, ಸುಬ್ರಹ್ಮಣ್ಯ ಮತ್ತು ಶಂಕರ್. ನಂಜುಂಡಯ್ಯನವರು ತಮ್ಮ ಆಸ್ತಿಯ ಆದಾಯ ಮಾತ್ರವಲ್ಲ, ತಮ್ಮಿಂದ ಸಾಲಪಡೆದ ಬಡ ರೈತರ ಮನೆ ಗದ್ದೆಗಳನ್ನೂ ಬಡ್ಡಿಯ ಹೆಸರಲ್ಲಿ ನುಂಗಿ ಹಣ ಕೂಡಿಟ್ಟವರು. ಅವರ ಈ ಸ್ವಭಾವದಿಂದ ಹಿರಿ ಮಗ ಸುಬ್ಬು ಮನದೊಳಗೇ ಕುದಿಯುತ್ತಿದ್ದ. ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರದ ಅವನನ್ನು ಪರ ಊರಿನ ಕಾಲೇಜಿಗೆ ಕಳುಹಿಸುವುದು ಹಣದ ಅಪವ್ಯಯವೆಂದು ಭಾವಿಸಿ ತಂದೆ ತಮ್ಮ ತೋಟ ಗದ್ದೆಗಳ ಉಸ್ತುವಾರಿಗೆ ಮನೆಯಲ್ಲೇ ಇರಿಸಿಕೊಳ್ಳುತ್ತಾರೆ. ಸಮವಯಸ್ಕ ರೊಂದಿಗೆ ಹೊರಗೆ ಹೋಗುವಾಗ ತನ್ನ ಕೈಯಲ್ಲಿ ಹಣವಿಲ್ಲದಿರುವುದರ ಬಗ್ಗೆ ತಾಯಿಯ ಮುಂದೆ ಬೇಸರಿಸಿದಾಗ ಅಸಹಾಯಕರಾಗಿ ಪಾರ್ವತಮ್ಮ ಮನೆಯ ಉಪಯೋಗಕ್ಕೆ ಇಟ್ಟ ಹಣವನ್ನೇ ಗಂಡನಿಗೆ ತಿಳಿಯದಂತೆ ಕೊಡುತ್ತಿದ್ದರು. ಈ ಪರಾಧೀನತೆ ಸುಬ್ಬು ವಿನ ಮುಂದಿನ ಜೀವನದ ದುಂದುಗಾರಿಕೆಗೆ ಕಾರಣವಾಯಿತು. ತಂದೆ ತಕ್ಕ ಸಮಯದಲ್ಲಿ ಗೌರಿಯೊಂದಿಗೆ ಸುಬ್ಬುವಿನ ಮದುವೆ ಮಾಡುತ್ತಾರೆ. ಸ್ವಲ್ಪ ಕಾಲದ ನಂತರ ತಂದೆ ಅಸೌಖ್ಯದಿಂದ ತೀರಿಕೊಂಡಾಗ ಹಣಕಾಸಿನ ವ್ಯವಹಾರ ಸುಬ್ಬುವಿನ ಕೈಗೆ ಬರುತ್ತದೆ ಹೀಗೆ ಕಾದಂಬರಿ ಸಾಗುತ್ತದೆ. ಕಾದಂಬರಿಯು 1953ರಲ್ಲಿ ಮೊದಲ ಮುದ್ರಣ ಕಂಡಿದ್ದು, 2013ರಲ್ಲಿ ನಾಲ್ಕನೇ ಮುದ್ರಣ ಕಂಡಿದೆ.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books