'ಹುತ್ತದ ಸುತ್ತ' ಕಾದಂಬರಿಯನ್ನು ಲೇಖಕಿ ಅಶ್ವಿನಿ(ಎಂ.ವಿ. ಕನಕಮ್ಮ) ಅವರು ರಚಿಸಿದ್ದಾರೆ. ಈ ಕಾದಂಬರಿಯಲ್ಲಿ ಲೇಖಕಿ ನಿರ್ಮಲ ಪ್ರೇಮ, ಕರ್ತವ್ಯನಿಷ್ಠೆಗಳ ಸೂಕ್ಷ್ಮತೆಯನ್ನು ಸರಲ ಭಾಷೆಯಲ್ಲಿ ವಿವರಿಸಿದ್ದಾರೆ. ಹಳ್ಳಿಯ ಭಾಷಾ ಶೈಲಿಯಲ್ಲಿ ಸಾಗುವ ಇಲ್ಲಿನ ಸಂವಾದಗಳು ಮುಗ್ಧತೆಯನ್ನು ಎತ್ತಿ ಹಿಡಿಯುತ್ತದೆ. ಹೆಣ್ಣೊಬ್ಬಳು ಪರಿಸ್ಥಿತಿಯ ಜಾಲಕ್ಕೆ ಸಿಕ್ಕು ಅನುಬವಿಸುವ ಮನಸಿನ ತೊಲಲಾಟಗಳನ್ನೇ ಕಥಾ ವಸ್ತುವನ್ನಾಗಿಸಿದ್ದಾರೆ ಲೇಖಕಿ ಅಶ್ವಿನಿ. ಇಲಲಿ ಸ್ತ್ರೀ ವಾದದ ಮುಖಗಳನ್ನು ಲೇಖಕಿ ಕೇಂದ್ರಿಕರಿಸಿದ್ದಾರೆ. ಒಟ್ಟಿನಲ್ಲಿ ಹೆಣ್ಣೊಬ್ಬಳು ರಹಸ್ಯ ಪತ್ತೆಹಚ್ಚುವುದಕ್ಕೊಸ್ಕರ ಮುನ್ನು ಆಪತ್ತಿಗೆ ಸಿಲುಕಿ ನಂತರ ಅದರಿಂದ ಯಾವ ರೀತಿ ಹೊರಬರುತ್ತಾಳೆ ಮತ್ತು ಇದರಿಂದ ಆಕೆ ತನ್ನ ಕುಟುಂಬದಲ್ಲಿ ಪಡುವ ಕಷ್ಟ ನೋವುಗಳ ಬಗೆಗಿನ ಕತೆಯನ್ನು ಈ ಕಾದಂಬರಿಯು ಹೊಂದಿದೆ.
ಕಾದಂಬರಿಗಾರ್ತಿ ಅಶ್ವಿನಿ ಹುಟ್ಟಿದ್ದು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಂಗಲಂ ಎಂಬ ಗ್ರಾಮದಲ್ಲಿ. ತಂದೆ ವೆಂಕಟ ರಾಘವಾಚಾರ್ಯರು, ತಾಯಿ ಲಕ್ಷ್ಮಮ್ಮ. ರಾಮಾಯಣ, ಮಹಾಭಾರತ ಕಥೆಗಳನ್ನು ಮಿಡ್ಲೆ ಸ್ಕೂಲಿನಲ್ಲಿದ್ದಾಗಲೇ ಓದಿ ಮುಗಿಸಿದ್ದರು. ಇವರ ಓದಿನ ಆಸಕ್ತಿಯನ್ನು ಗಮನಿಸಿದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಯ್ಯನವರು ಹೆಚ್ಚಿನ ಪ್ರೋತ್ಸಾಹ ನೀಡಿದರು. ಅಕೌಂಟೆಂಟ್‌ರವರ ಕಚೇರಿಯಲ್ಲಿದ್ದಾಗಲೇ ಕಿರು ಪ್ರಹಸನಗಳನ್ನು ಆಕಾಶವಾಣಿಗಾಗಿ ಬರೆದು ಕೊಡತೊಡಗಿದ್ದರು. ಹೀಗೆ ಪ್ರಾರಂಭವಾದ ಇವರ ಸಾಹಿತ್ಯದ ಬರವಣಿಗೆ ಸಾಗುತ್ತಾ ಬಂದು ‘ನಿಲುಕದ ನಕ್ಷತ್ರ’ ಎಂಬ ಕಾದಂಬರಿ ರಚಿಸಿದರು. ನಂತರ ವೆಂಕಟೂವಿನ ಬುಗುರಿ, ತುಪ್ಪದ ದೀಪ,ನಾನೇಕೆ ಬೇಡವಾದೆ ಮುಂತಾದ ಇಪ್ಪತ್ತು ಕಥೆಗಳು ಸುಧಾ, ಮಯೂರ, ಪ್ರಜಾಮತ, ಕರ್ಮವೀರ ...
READ MORE