ಕಲಿಕೆಗಾಗಿ ಸದಾ ಹಾತೊರೆಯುವ ಹುಡುಗಿ ತುಂಗಾ,ತನ್ನ ಸುತ್ತಮುತ್ತ ಘಟನೆಗಳ ಕುರಿತು ಹಾಗೂ ಸುತ್ತಲ ಸಂಬಂಧಗಳಿಗೆ ಕಣ್ಣು ತೆರೆದಿಟ್ಟುಕೊಂಡಿರುವ ಕುತೂಹಲಿ.ಪ್ರಶ್ನಿಸು ಮತ್ತು ಹುಡುಕಾಡುದು ತುಂಗಾಳ ಹವ್ಯಾಸ.ಕಾಸಗೀಕರಣದಿಂದ ನಲುಗಿದ ಸರಕಾರಿ ಶಾಲೆಗಳ ಪರಿಸ್ಥಿತಿಯನ್ನು ತಿಳಿಸುತ್ತದೆ.ವಯಸ್ಸು ಮತ್ತು ಪ್ರತಿಭೆಗೆ ಪೂರಕವಾದ ಶಿಕ್ಷಣ ಸಿಗದಿರುದು ವಿದ್ಯರ್ಥಿಗಳ ಭವಿಷ್ಯಕ್ಕೆ ಮಾರಕ ವಾಗಿದೆ.ಸ್ವಂತ ಆಲೋಚನೆಯಾಗಲೀ ಅಥವಾ ನೇರವಾದ ಒಳಗೊಳ್ಳುವಿಕೆಯಾಗಲೀ ಇಲ್ಲದ ಕಲಿಕೆಯ ಪ್ರಕ್ರಿಯೆಯನ್ನು ನಾರ್ಮಲ್ ಶಿಕ್ಷಣವೆಂದು ನಾವು ಒಪ್ಪಿಕೊಳ್ಳುವಂಥ ಸ್ಥಿತಿಗೆ ತಲುಪಿದ್ದೇವೆ.ಶಿಕ್ಷನದ ಮೂಲ ಆಶಯ ಮತ್ತು ಗುರಿಯ ಬಗ್ಗೆ ವಿವರಿಸಲಾಗಿದೆ.ಈ ಕೃತಿ, ತನ್ನೆಲ್ಲಾ ತಾಜಾತನ, ಮುಕ್ತತೆ ಮತ್ತು ಉಲ್ಲಾಸಗಳೊಂದಿಗೆ ನಮ್ಮ ಬಾಲ್ಯದ ನೆನಪನ್ನು ತಾಜಗೊಳಿಸುತ್ತದೆ.
ಲೇಖಕಿ, ಅನುವಾದಕಿ, ಪತ್ರಕರ್ತೆ ಹಾಗೂ ಸಾಹಿತಿ ಮಾತ್ರವಲ್ಲದೆ ಸಮಾಜ ಕಾರ್ಯದಲ್ಲೂ ತೊಡಗಿರಿವ ವಿ. ಗಾಯತ್ರಿ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಗ್ರಾಮದವರು. ಅವರ ‘ತುಂಗಾ’ ಮಕ್ಕಳ ಸೃಜನಶೀಲ ಕಾದಂಬರಿ 7ನೇ ತರಗತಿಗೆ ಪಠ್ಯವಾಗಿದೆ. ಡಿ.ಡಿ.ಭರಮಗೌಡ್ರ ಬದುಕು- ಬೇಸಾಯ, ತೊತ್ತೋ ಚಾನ್- ವಿಶ್ವ ವಿಖ್ಯಾತ ಜಪಾನಿ ಕಾದಂಬರಿಯ ಕನ್ನಡ ಅನುವಾದ, ಸಾವಯವ ಪರಂಪರೆಯ ಕಥನ ಭಾಗ 1, 2,3 ಮತ್ತು 4 – ಸಹಜ/ಸಾವಯವ ರೈತರ ಕೃಷಿ ಮತ್ತು ಬದುಕುಗಳು (28 ಕಥನಗಳ ಸಂಗ್ರಹ)- ದಾಖಲಿಸಿ ನಿರೂಪಿಸಿದ ಕೃತಿಗಳು. ‘ಪುಟ್ಟೀರಮ್ಮನ ಪುರಾಣ’, ‘ತೆರೆಮರೆಯ ಸತ್ಯಕಥೆ’, ‘ಸಾವಯವ ಸಂಗತಿ’ ಅವರ ಪ್ರಮುಖ ...
READ MORE