ವಕ್ಷ ಸ್ಥಲ

Author : ಆಶಾ ರಘು

Pages 208

₹ 270.00




Year of Publication: 2025
Published by: ಉಪಸನಾ ಪ್ರಕಾಶನ
Address: ಫ್ಲ್ಯಾಟ್ ನಂ.#201, 2ನೇ ಫ್ಲೋರ್, #102,ಕಲ್ಪತರು ರಿನೈಸೆನ್ಸ್, 9ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು-03\n

Synopsys

‘ವಕ್ಷ ಸ್ಥಲ’ ಆಶಾ ರಘು ಅವರ ಮನೋವೈಜ್ಞಾನಿಕ ಕಾದಂಬರಿಯಾಗಿದೆ. ಸುಪ್ತಪ್ರಜ್ಞೆ ಮತ್ತು ಅರಸುಪ್ತಪ್ರಜ್ಞೆಗಳು ವ್ಯಕ್ತಿಯ ಮನಸ್ಸಿನ ಮೇಲೆ ಮೂಡಿಸುವ ಪರಿಣಾಮ ಕನಸುಗಳ ಮೂಲಕ ವ್ಯಕ್ತವಾಗುವುದನ್ನು ಇಲ್ಲಿ ಗಮನಿಸಬಹುದು.

ಕೃತಿಯಲ್ಲಿ ಮೂರು ನೆಲೆಗಳಿದ್ದು ಪೌರಾಣಿಕ ನೆಲೆ, ಐತಿಹಾಸಿಕ ನೆಲೆ, ವರ್ತಮಾನದ ನೆಲೆಯಾಗಿ ವಿಭಾಗಗೊಂಡಿದೆ. ಪೌರಾಣಿಕ ನೆಲೆಯಲ್ಲಿ ಶ್ರೀನಿವಾಸ ಕಲ್ಯಾಣದ ವಿವರವಾದ ಪ್ರಸ್ತಾಪವಿದೆ. ಆಕಾಶರಾಜನ ಮಗಳಾಗಿ ಪದ್ಮಾವತಿ ಭೂಲೋಕದಲ್ಲಿ ಜನಿಸುವುದರ ಹಿನ್ನೆಲೆಯಿಂದ ಆರಂಭವಾಗಿ, ಭೂಲೋಕಕ್ಕೆ ಲಕ್ಷ್ಮಿಯನ್ನು ಅರಸುತ್ತಾ ಬಂದ ವಿಷ್ಣು ಶ್ರೀನಿವಾಸನಾಗಿ ಬೆಳೆಯುವುದು, ಪದ್ಮಾವತಿ- ಶ್ರೀನಿವಾಸರ ಪರಸ್ಪರ ಭೇಟಿ, ಅನುರಾಗ, ವಿರಹ, ಮಿಲನ, ವಿವಾಹದ ಕಥೆ ಇತ್ಯಾದಿ ವಿವರಗಳೆಲ್ಲವನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಡುತ್ತದೆ. ಗೋಕುಲದ ರಾಧೆ-ಶ್ಯಾಮರ ಪ್ರೇಮ, ಗೋಕುಲ ನಿರ್ಗಮನ, ರಾಧೆಯ ವಿರಹ, ಒಂಟಿತನ ಮತ್ತು ರಾಧೆಯ ವೃದ್ಧಾಪ್ಯದಲ್ಲಿ ಅವರಿಬ್ಬರ ಕೊನೆಯ ಭೇಟಿಯ ಕಥೆ ಕೂಡಾ ಆಪ್ತವಾಗುವಂತೆ ಚಿತ್ರಿತವಾಗಿದೆ. 

ಐತಿಹಾಸಿಕ ನೆಲೆಯಲ್ಲಿ ತಾನು ಆರಾಧಿಸುವ ದೇವರಿಗೆ ತಾನೇ ಹೂಮಾಲೆಯಾಗಿಬಿಡುವ ಆಂಡಾಳ್ ಹಾಗೂ ಅವಳು ರಚಿಸಿದ ತಿರುಪ್ಪಾವೈ ಕಾವ್ಯದ ಕಥಾನಕ ಅತ್ಯಂತ ಆಕರ್ಷಕವಾಗಿ ಚಿತ್ರಿತವಾಗಿದೆ. ಗಿರಿಧರ ಸಖಿ ಮೀರಾಳ ಜೀವನಗಾಥೆ ಮತ್ತು ಕೃಷ್ಣನನ್ನು ಕುರಿತ ಅವಳ ಅಂತರಂಗದ ಆಲಾಪಗಳು ಚಿತ್ರಿತವಾದ ಬಗೆ ಲೇಖಕಿಯ ಭಾಷಾ ಸೌಂದರ್ಯವನ್ನೂ ಪ್ರಬುದ್ಧತೆಯನ್ನೂ ಮನಗಾಣಿಸುತ್ತದೆ. ಬೀಬಿ ನಾಚಿಯಾರಳ ಕೃಷ್ಣನ ಆರಾಧನೆ, ಕೊನೆಯಲ್ಲಿ ತನ್ನ ಪ್ರೀತಿಯ ಗೊಂಬೆ ಚೆಲುವನಾರಾಯಣನಲ್ಲಿಯೇ ಲೀನವಾಗುವ ಕಥೆ ಹಾಗೂ ದೇವರಿಗೆ ಅರ್ಪಿಸುವ ಮುತ್ತಿನ ಆರತಿಯ ಸೇವೆಯನ್ನೇ ಬದುಕಿನ ಗುರಿಯಾಗಿಸಿಕೊಂಡ ತರೀಕೊಂಡ ವೆಂಕಮಾಂಬಳಾ ಕತೆ ಸ್ವಾರಸ್ಯಕರವಾಗಿ ಕಥಾನಕದೊಂದಿಗೆ ಮಿಳಿತವಾಗಿದೆ.

ವರ್ತಮಾನದ ನೆಲೆಯಲ್ಲಿ ಇಲ್ಲಿರುವುದು ಜಾನಕಿ-ರಾಘವರ ಭೇಟಿ, ಸ್ನೇಹ, ಬಾಂಧವ್ಯ, ಪ್ರೀತಿ, ವಿವಾಹ, ಅವರ ಸುಮಧುರ ವೈವಾಹಿಕ ಜೀವನ ಮತ್ತು ವಿರಹದ ಕಥೆ. ಈ ಮೂರೂ ನೆಲೆಗಳಲ್ಲಿ ಪ್ರೇಮ ಮತ್ತು ಆರಾಧನೆಯ ಕಥೆಗಳು ಬೆಳೆಯುತ್ತಾ ಹೋಗುತ್ತವೆ.

About the Author

ಆಶಾ ರಘು
(18 June 1979)

ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ', ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', ...

READ MORE

Related Books