ಖ್ಯಾತ ಲೇಖಕ ರಾಮಚಂದ್ರ ಭಾವೆ ಅವರು ಬರೆದ ಪುರಾಣೇತಿಹಾಸಿಕ ಕಾದಂಬರಿ. 18 ಅಕ್ಷೋಹಿಣಿ ಸೈನ್ಯದೊಂದಿಗೆ ಯುದ್ಧವಾಡಿದ ಮಹಾಭಾರತ ಮತ್ತು ತದನಂತರದ ದಿನಗಳಲ್ಲಿ ಧರ್ಮಾಧಾರಿತ ವ್ಯವಸ್ಥೆ ನಿರ್ಮಾಣಗೊಂಡಿತೆ? ಎಂದು ಜಿಜ್ಞಾಸೆ ವ್ಯಕ್ತಪಡಿಸುವ ಕಾದಂಬರಿ ಇದು. ವಿಷಯ ವಸ್ತು, ಸನ್ನಿವೇಶಗಳ ನಿರೂಪಣೆಯಿಂದ, ಹೊಸ ಹೊಸ ಚಿಂತನೆಗಳನ್ನು ಮಹಾಭಾರತಕ್ಕೆ ಅನ್ವಯಿಸಿ ಬರೆದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ.
ಸಾಹಿತಿ ರಾಮಚಂದ್ರ ಭಾವೆ ಅವರು 1949 ಮಾರ್ಚ್ 12ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಜನಿಸಿದರು. ಅಂಚೆ ಕಚೇರಿಯಲ್ಲಿ ನಿವೃತ್ತರು. `ಪ್ರಮೋಶನ್, ಎಂಡಿ ನಾಗರ, ಸುಮನಾ ಅಜ್ಞಾ, ಸಮಾಜಸೇವೆ, ಎರಡು ತಲೆ ರಾಜಕುಮಾರ' ಇತ್ಯಾದಿ. ಇವರಿಗೆ ಬಾಲಕೃಷ್ಣ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಇವರ ಮೊದಲ ಕಾದಂಬರಿ ‘ಅಜ್ಞಾತ’. ಇದಕ್ಕೆ ಅಭಿಮಾನಿ ಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆಯಿತು. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ‘ತೆರೆದಬಾಗಿಲು’ ಕಥೆಗೆ ಪ್ರಥಮ ಬಹುಮಾನ; ಮುಂಬಯಿಯ ಸ್ನೇಹ ಸಂಬಂಧ ಪತ್ರಿಕೆಯ ನಾಟಕ ಸ್ಪರ್ಧೆಯಲ್ಲಿ ‘ಎರಡು ತಲೆಯ ರಾಜ ಕುಮಾರ’ ನಾಟಕಕ್ಕೆ ದ್ವಿತೀಯ ಬಹುಮಾನ; ಉತ್ಥಾನ ಕಥಾ ...
READ MORE