‘ಮಿಸ್ಸಿನ ಡೈರಿ’ ಕೃತಿಯು ಮೇದಿನಿ ಕೆಸವಿನಮನೆ ಅವರ ಸೃಜನಶೀಲ ಸಾಹಿತ್ಯ ಕೃತಿಯಾಗಿದೆ. ಕೃತಿ ಕುರಿತು ಸೇತುರಾಮ್ ಎಸ್ ಎನ್ ಅವರು ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ; ಬದುಕು ಹಕ್ಕಲ್ಲ; ಕೃತಜ್ಞತೆ. ಹಕ್ಕು ಋಣ, ಕೃತಜ್ಞತೆ ಶಾ೦ತಿ ಮತ್ತು ನೆಮ್ಮದಿ. ಹಕ್ಕಲ್ಲಿ ಹಸಿವು, ಬರ. ಕೃತಜ್ಞತೆಯಲ್ಲಿ ತೃಪ್ತಿ. ಯಾವುದೂ ಹಕ್ಕಾಗದೇ ಎಲ್ಲವನ್ನೂ ಕೃತಜ್ಞತಾ ಭಾವದಲ್ಲಿ ಸ್ವೀಕರಿಸಿರುವ ಈ ಲೇಖಕಿಯ ಮನಸ್ಥಿತಿ ಪ್ರಬುದ್ಧವಾದರೂ ಜೀವರಸ ಬಾಲ್ಯದ ಮುಗ್ಧತೆಯೇ.. ಹಾಗಾಗಿ ಒಂದು ಪ್ರೈಮರಿ ಶಾಲೆಯ ಹತ್ತು ಮತ್ತಷ್ಟು ವರ್ಷಗಳ ಬಾಲಿಶವಾಗಿ ಕಳೆದುಹೋಗಬಲ್ಲಂತಹ ಅನುಭವಗಳು ಪ್ರಬುದ್ಧವಾಗಿ ದಾಖಲಾಗಿವೆ. ಮಕ್ಕಳೊಟ್ಟಿಗೆ ಮಕ್ಕಳಾಗುವುದು ಸುಲಭ. ಘಟನೆಗಳನ್ನು ಮಕ್ಕಳ ಆಟಿಕೆಯೆನಿಸದೇ ಪ್ರಬುದ್ಧವಾಗಿ ಓದುಗರಿಗೆ ತಲುಪಿಸುವುದು ಕಷ್ಟ. ಮೇದಿನಿ ಕೆಸವಿನಮನೆಯವರು ಈ ನಾಡಿನ ಒಂದು ಗ್ರಾಮೀಣ ಪ್ರದೇಶದ ದೈನಂದಿನ ಬದುಕಿನ ಸ್ಥಿತಿಗತಿಗಳನ್ನು ಪ್ರೈಮರಿ ಶಾಲೆಯ ಮಕ್ಕಳ ದೃಷ್ಟಿಕೋನದಲ್ಲಿ ಪ್ರಬುದ್ಧವಾಗಿ ಬಿ೦ಬಿಸಿದ್ದಾರೆ. ಭಾಷೆ ಇಷ್ಟವಾಗತ್ತೆ, ಭಾವ ಮನಸ್ಸು ಮುಟ್ಟುತ್ತೆ. ಅವರದ್ದೇ ಮಾತು; "ಬಾಲ್ಯವೆ೦ಬುದು ಸಮೃದ್ಧವಾಗಿದ್ದರೆ ಬದುಕಿನಲ್ಲಿ ಭಾವ ಎ೦ದೂ ಬತ್ತುವುದಿಲ್ಲ" - ಬಡತನದ ಮನೆಗಳಲ್ಲಿ ಹಸಿವಿನದ್ದೇ ತಾಂಡವ. ಅದು ಲಯಬದ್ಧವಾದಾಗ ಭಾವದ ಚಿಲುಮೆ. ಮುಳುಗಡೆಯ ಭೀತಿ, ಕೈಚಾಚಲಾಗದ ಮನಸ್ಥಿತಿ. ಇಲ್ಲಿ ಒಡಲ ಹಸಿವನ್ನು ತಣಿಸಿ, ಭಾವ ಸಮೃದ್ಧಿಯನ್ನು ಜಿನುಗಿಸಿದ ಅದೊಂದು ತಲೆಮಾರಿಗೆ ಶರಣು. ಕೊನೆಯ ಮಾತಲ್ಲಿ ಮಂಗಳ ಹಾಡಿದ್ದೀರಿ? ಇದು ನಾಂದಿ; ಮಂಗಳಕ್ಕಿನ್ನೂ ಸಮಯವಿದೆ! ಎಂದಿದ್ದಾರೆ.
ಲೇಖಕಿ ಮೇದಿನಿ ಕೆಸವಿನಮನೆ ಅವರು ಮೂಲತಃ ಸಾಗರದವರು. ಆಯನೂರಿನ ಶಿಕ್ಷಕಿ ವೃತ್ತಿಯನ್ನು ನಿರ್ವಹಿಸುತ್ತಿರುವ ಮೇದಿನಿ ಕೆಸವಿನಮನೆ ಅವರಿಗೆ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಮಿಸ್ಸಿನ ಡೈರಿ ...
READ MORE