ಹೃದಯ ರಾಗ

Author : ಶೈಲಜಾ ಸುರೇಶ್

Pages 208

₹ 100.00




Year of Publication: 2006
Published by: ಪಾಂಚಜನ್ಯ ಪಬ್ಲಿಕೇಷನ್ಸ್
Address: #420/28, 6ನೇ ಮತ್ತು 7ನೇ ಕ್ರಾಸ್ ಮಧ್ಯೆ, ಅಮರಜ್ಯೋತಿನಗರ ಬೆಂಗಳೂರು-560040

Synopsys

ಶೈಲಜಾ ಸುರೇಶ ಅವರ ಕಾದಂಬರಿ-ಹೃದಯ ರಾಗ. ಪ್ರೀತಿ-ಪ್ರೇಮವು ದೈಹಿಕ ಆಕರ್ಷಣೆಯನ್ನೂ ಮೀರಿದ ಪಾವಿತ್ರತೆ ಇರುವ ಮನೋಸ್ಥಿತಿ ಎಂಬುದು ಈ ಕಾದಂಬರಿಯ ಕಥಾ ವಸ್ತು.ಸಮಾಜ-ಸಂಪ್ರದಾಯಕ್ಕೆ ಪತಿ ಹಾಗೂ ಪ್ರಿಯಕರನಿಂದ ಸಮಾನ ಅಂತರ ಕಾಯ್ದುಕೊಂಡೇ ತನ್ನ ಸ್ವಾಭಿಮಾನಿ ಬದುಕು ನಡೆಸುವ ಮಹಿಳೆಯೊಬ್ಬಳು ಈ ಕಾದಂಬರಿಯ ನಾಯಕಿ. ಸ್ತ್ರೀ ಸಮಾನತೆ ಸಮರ್ಥಿಸುವ ಹಾಗೂ ಶೋಷಣೆ ವಿರೋಧಿ ಧ್ವನಿಯ ಸಂಕೇತ ಅವಳು. 

ಗುಲಬರ್ಗಾ ವಿ.ವಿ. ಜಯತೀರ್ಥ ರಾಜಪುರೋಹಿತ ಕಥಾ ಸ್ಪರ್ಧೆಯಲ್ಲಿ ’ಹೃದಯರಾಗ’ ಕಥೆಯು ಉತ್ತಮ ಕಥೆ ಎಂದು ಆಯ್ಕೆಯಾಗಿತ್ತು. ಕೇವಲ 8 ಪುಟಗಳಲ್ಲಿ ಅಡಕವಾಗಿದ್ದ ಈ ಕಥೆಯ ಆಳ-ವಿಸ್ತಾರವನ್ನು ಹಿಗ್ಗಿಸಿ ಕಾದಂಬರಿ ರೂಪ ಕೊಡಲಾಗಿದೆ ಎಂದು ಲೇಖಕಿ ಶೈಲಜಾ ಸುರೇಶ್ ಹೇಳಿಕೊಂಡಿದ್ದಾರೆ.  

ಸಂಪ್ರದಾಯದ ಸಂಕೋಲೆಗಳಿಂದ ಸ್ತ್ರೀಯು ಮುಕ್ತಳಾಗಬೇಕು ಹಾಗೂ ಅದಕ್ಕೆ ಬೇಕಾಗುವ ಮನಸ್ಸಿನ ಸದೃಢತೆಗಾಗಿ ಪೂರ್ವ ಸಿದ್ಧತೆ ಅಗತ್ಯ ಎಂಬ ಆಶಯದೊಂದಿಗೆ ಕಾದಂಬರಿ ರಚಿತಗೊಂಡಿದೆ.

 

About the Author

ಶೈಲಜಾ ಸುರೇಶ್
(02 October 1964)

ಶೈಲಜಾ ಸುರೇಶ್ (ದಾಕ್ಷಾಯಿಣಿ ಎಚ್.), ಬಿ.ಎ. ಪದವೀಧರರು.  1964ರ ಅಕ್ಟೋಬರ್ 2 ರಂದು ಹಾಸನದಲ್ಲಿ ಜನನ. ತಂದೆ  ಹೆಚ್. ಹನುಮಂತಪ್ಪ, ತಾಯಿ- ಸಾವಿತ್ರಮ್ಮ. ಕಾದಂಬರಿ : ಇಂದಿರಾ 2004, ಹೃದಯರಾಗ 2006, ಬಾಳಿನ ಹೊಂಬೆಳಕು 2008,  ಕಥಾಸಂಕಲನ : ಹೊಂಗನಸು 2012ರಲ್ಲಿ ಪ್ರಕಟವಾಗಿವೆ. ಸಣ್ಣಕತೆ ಹಾಗೂ ನಾಟಕಗಳನ್ನು ರಚಿಸಿದ್ದು ಹವ್ಯಾಸಿ ಪತ್ರಕರ್ತೆ ಕೂಡ. ಆಕಾಶವಾಣಿ, ದೂರದರ್ಶನಕ್ಕಾಗಿ ಹಲವು ಬರೆಹಗಳನ್ನು ನೀಡಿದ್ದಾರೆ. ಅವರು ಲೇಖಕಿಯರ ಸಾಹಿತ್ಯ ವೇದಿಕೆಯ ಅಧ್ಯಕ್ಷರು. ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ದೇವರ ದಾಸಿಮಯ್ಯ ಪ್ರಶಸ್ತಿ, ಸಾಹಿತ್ಯ ಸೇತು ಪ್ರಶಸ್ತಿ, ಗೌರವಹುದ್ದೆ : ಹಾಸನ ಜಿಲ್ಲಾ ಕನ್ನಡ ಲೇಖಕಿಯರ ...

READ MORE

Related Books