'ನೆನಪಿನ ನೆರಳು' ಆರತಿ ವೆಂಕಟೇಶ್ ಅವರ ಕೃತಿಯಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿ ತಂದೆ ತಾಯಿಯರ ಪ್ರೀತಿ, ಮಮತೆ, ರಕ್ಷಣೆ ತುಂಬಾ ಅವಶ್ಯಕವಾಗಿರುತ್ತದೆ. ತಮ್ಮ ವೈಭೋಗ ಜೀವನದಲ್ಲಿ ಮಕ್ಕಳನ್ನು ನಿರ್ಲಕ್ಷಿಸಿದರೆ ಅವರ ಜೀವನ ಬಹಳ ದುರಂತವಾಗುತ್ತದೆ. ಮನುಷ್ಯನಿಗೆ ಸಿರಿತನದ ಜೊತೆ ಒಳ್ಳೆಯತನವು ಇರಬೇಕು. ತಮ್ಮ ವಿರಸ ದಾಂಪತ್ಯದಲ್ಲಿ ಸಿರಿತನದ ಲಾಲಸೆಯಲ್ಲಿ ಯೌವ್ವನದ ಮದದಲ್ಲಿ ಮಕ್ಕಳ ಮೇಲೆ ದೌರ್ಜನ್ಯ ತೋರುವ ತಂದೆ ತಾಯಿಗಳು ಸಮಾಜಘಾತಕರು ಎಂದು ಹೇಳುತ್ತದೆ. ಚಿಕ್ಕ ವಯಸ್ಸಿನಲ್ಲಿ ನಡೆಯುವ ಎಷ್ಟೋ ಘಟನೆಗಳು ಮಕ್ಕಳ ಎಳೆಯ ಮನಸ್ಸಿನ ಮೇಲೆ ಅಚ್ಚೊತ್ತಿ ಬಿಡುತ್ತದೆ. ಮುಂದೆ ಇದರಿಂದ ಎಂತ ಘೋರ ಘಟನೆಗಳು ನಡೆಯುತ್ತದೆ ಎಂಬುದನ್ನು ತಿಳಿಯಲು ಈ ಕಾದಂಬರಿಯ ಕಥಾವಸ್ತುವೇ ಸಾಕ್ಷಿ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE