ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಅವರ ಐತಿಹಾಸಿಕ ಕಾದಂಬರಿ-ದುರ್ಗದ ಬೇಡರ್ದಂಗೆ. 1849ರಲ್ಲಿ ಬ್ರಿಟಿಷರ ವಿರುದ್ಧ ನಡೆದ ದಂಗೆಯ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಟ್ಟಿಕೊಡಲಾಗಿದೆ. ಚಾರಿತ್ರಿಕವಾಗಿ ಮಹತ್ವದ ಸಂಗತಿಗಳನ್ನು ಆಯ್ಕೆ ಮಾಡಿ ಕಥೆಯ ರೂಪ ನೀಡಿ ವಿವರಿಸಿದ್ದು, ವಸ್ತುವು ತೀವ್ರತೆಯನ್ನು ಒಳಗೊಂಡಿದೆ. ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ ಇತ್ಯಾದಿ ಸಾಹಿತ್ಯಕ ಅಂಶಗಳು ಓದುಗರ ಗಮನ ಸೆಳೆಯುತ್ತವೆ.
ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...
READ MORE