‘ಅಭಿಜ್ಞಾನ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಹಿಂದಿನ ನೆನಪು ಒಂದಲ್ಲ ಒಂದು ಸಮಯ ಎಲ್ಲರನ್ನೂ ಕಾಡುವುದರಲ್ಲಿ ವಿಶೇಷವಿಲ್ಲ. ಆದರೆ ತನ್ನ ಹುಟ್ಟಿದೂರಿಗೇ ಹೋಗುವಾಗ ಆಗುವ ಆನಂದ ಹೇಳಲಸಾಧ್ಯ. ಆದರೆ ಅದು ತನ್ನ ಹುಟ್ಟೂರು ಅಂತ ತಿಳಿಯದೇ ಇದ್ದರೆ.? ಕುಮಾರ್ ತನ್ನ ಹಿತೈಷಿ ಶಂಕ್ರಯ್ಯನವರ ಮಾತಿನಂತೆ ಐದು ಲಕ್ಷ ರೂಪಾಯಿ ಹಿಡಿದು ಅನ್ನಪೂರ್ಣ ಎಸ್ಟೇಟ್ ತಲುಪಿದಾಗ ಅಲ್ಲಿ ಅವನಿಗೆ ಆಗುವ ಅನುಭವಗಳೇ ವಿಚಿತ್ರ. ಇಲ್ಲಿನ ಪರಿಸರ ನನಗೆ ಚಿರಪರಿಚಿತ. ಈ ಮನೆಯಲ್ಲಿ ನಾನು ಇದ್ದೆ, ಇಲ್ಲಿನ ಒಂದೊಂದು ಕೋಣೆಯೂ ಪರಿಚಿತ. ಇಲ್ಲಿ ತಂದೆ ತಾಯಿಯರ ನೆನಪು ಕಾಡುತ್ತದೆ ಎನ್ನುವ ಭಾವ. ಕುಮಾರ್‌ಗೆ ತನ್ನ ತಂದೆ ತಾಯಿ ಎಲ್ಲಿ ಎನ್ನುವುದು ತಿಳಿದಿಲ್ಲ. ಶಂಕ್ರಯ್ಯನವರ ಮಾತಿನಂತೆ ಒಂದು ವಾರ ಎಸ್ಟೇಟ್‌ನಲ್ಲಿಯೇ ಇದ್ದಾಗ ಅವನ ಮಗಳು ಗೀತಾಳ ಸ್ನೇಹವಾಗುತ್ತದೆ. ಆದರೆ ಕುಮಾರನ ತಲೆಯಲ್ಲಿ ಮೂಡುತ್ತಿದ್ದ ವಿಚಾರಗಳಿಗೆ ಮಾತ್ರ ಉತ್ತರ ಕೊಡೋರು ಯಾರೂ ಇರಲಿಲ್ಲ. ಅಲ್ಲಿ ಅವನು ಹೆಜ್ಜೆಯಿಡುವ ಒಂದೊಂದು ತಾಣವೂ ಅವನನ್ನು ಕಾಡುತ್ತದೆ. ಹಾಗಾದರೆ ಕುಮಾರ್‌ಗೂ ಅನ್ನಪೂರ್ಣ ಎಸ್ಟೇಟ್‌ಗೂ ಏನು ಸಂಬಂಧ, ಶಂಕ್ರಯ್ಯ, ಯಾರು, ಕುಮಾರನ ತಂದೆ ತಾಯಿ ಯಾರು ಇವೆಲ್ಲಾ ಕುತೂಹಲಕಾರೀ ಅಂಶಗಳು ತಿಳಿಯಬೇಕಾದರೆ ಓದಬೇಕಾದ ಕಾದಂಬರಿ ಅಭಿಜ್ಞಾನ .
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE