ಹಾಲಪ್ಪ-ಲೇಖಕ ಲಕ್ಷ್ಮಣ ಕೊಡಸೆ ಅವರ ಕಾದಂಬರಿ. `ಗಂಡು' ಹೆಣ್ಣಾಗುವ, `ಹೆಣ್ಣು' ಗಂಡಾಗುವ `ಕಾಲ'ದ ಬೆಳವಣಿಗೆಯನ್ನು ವಿಸ್ಮಯದಿಂದ ಈ ಕಾದಂಬರಿ ಹಿಡಿದಿಡುತ್ತದೆ. ಇಲ್ಲಿ ಗಂಡು ತನ್ನ ಅರಿವಿನಿಂದಾಗಿಯೇ ಹೆಣ್ಣಾಗುತ್ತಾನೆ. ತಾನು ಮೃದುವಾಗುವ ಬಗ್ಗೆ ಆತನಿಗೆ ಕೀಳರಿಮೆ ಇಲ್ಲ. ಆಧುನಿಕ ವಿದ್ಯಾಭ್ಯಾಸ ಮತ್ತು ಉದ್ಯೋಗ ನೀಡಿದ ಆರ್ಥಿಕ ಸ್ವಾತಂತ್ರ್ಯದಿಂದ ಹೆಣ್ಣನ್ನು ಗಂಡಾಗಿಸಿದ ಬಗೆಗೆ ಆತನಿಗೆ ಆಕ್ಷೇಪವೂ ಇಲ್ಲ. ಬದಲಿಗೆ ಆಧುನಿಕಳಾದ ಆಕೆಯನ್ನು ಅರ್ಥ ಮಾಡಿಕೊಳ್ಳಬಲ್ಲ ವಿವೇಕವಿದೆ ಎಂಬುದು ಈ ಕಾದಂಬರಿ ಕುರಿತು ಬಹುತೇಕ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.
ಕತೆಗಾರ, ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು 1953 ಏಪ್ರಿಲ್ 12ರಂದು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೊಡಸೆ ಗ್ರಾಮದಲ್ಲಿ ಜನಿಸಿದರು. ತಾಯಿ ಭರ್ಮಮ್ಮ, ತಂದೆ ಕರಿಯನಾಯ್ಕ. ಹುಟ್ಟೂರು ಹಾಗೂ ಹೊಸನಗರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಪ್ರಜಾವಾಣಿಯಲ್ಲಿ ಉಪಸಂಪಾದಕರಾಗಿ, ಮುಖ್ಯವರದಿಗಾರರಾಗಿ ಸುದ್ದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ‘ಅಪ್ಪನ ಪರಪಂಚ, ಕೊಡಚಾದ್ರಿ, ಸಹಪಥಿಕ, ಅವ್ವ, ಬಿ. ವೆಂಕಟಾಚಾರ್ಯ, ಕುವೆಂಪು ಮತ್ತು, ಕನ್ನಡ ವಿಮರ್ಶಾ ವಿವೇಕ, ಹಾಯಿದೋಣಿ’ ಅವರ ಪ್ರಮುಖ ಕೃತಿಗಳು. ...
READ MORE