ಕರಣಂ ಪವನ್ ಪ್ರಸಾದ್ ಅವರ ಎರಡನೇ ಕಾದಂಬರಿ ’ನನ್ನಿ’. ಅಪರಿಚಿತ, ಅಪರೂಪದ ಕಥಾಹಂದರದಲ್ಲಿ ಓದುಗನೊಬ್ಬನು ಪಯಣಿಸುತ್ತಾನೆ. ಚರ್ಚಿನ,ಮಿಷನರಿಗಳ ವ್ಯವಸ್ಥೆಯ ನೋಟವನ್ನು ಒಬ್ಬರ ಕಣ್ಣುಗಳಿಂದ ನೋಡುವುದು ಅಚ್ಚರಿಯೆನಿಸುತ್ತದೆ. ಸೇವೆಯ ಸುತ್ತಲೂ ಸುತ್ತುವ ಕಥೆ ಪ್ರತಿ ಪ್ರಕ್ರಿಯೆಯ ಅಂತರಾಳವನ್ನು ಅರಿಯುವಲ್ಲಿ ಸಾಗುತ್ತದೆ. ಸತ್ಯಾನ್ವೇಷಣೆಯೇ ಮೂಲವಾಗಿರುವ ಈ ಕಾದಂಬರಿಯು ಒಬ್ಬರಿಗೆ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದ ತತ್ವಗಳ ಮೇಲೆ ಪ್ರಶ್ನೆಯೆತ್ತುತ್ತದೆ. ಈ ಪುಸ್ತಕದಲ್ಲಿ ಹೆಚ್ಚು ತರ್ಕಕ್ಕೆ ಒಡ್ಡಿರುವ, ಅಡಿಪಾಯವಾಗಿ ಬಳಸಿರುವ ‘ಸತ್ಯಕ್ಕೆ ಹತ್ತಿರವಾದರೂ ,ದೂರವಾದರೂ ಸಾವು’ ಎಂಬ ಮಾತು ಮತ್ತೆ ಮತ್ತೆ ಯೋಚಿಸುವಂತೆ ಮಾಡುತ್ತದೆ.
ರಂಗನಿರ್ದೇಶಕ, ನಾಟಕಕಾರ ಕರಣಂ ಪವನ್ ಪ್ರಸಾದ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವೀಧರರು. ವೃತ್ತಿಯಿಂದ ಬಳಕೆದಾರ ಇಂಟರ್ಫೇಸ್ ಡಿಸೈನರ್ ಆಗಿದ್ದು, ಸಂಶೋಧನೆ, ಸಾಹಿತ್ಯ ಅಧ್ಯಯನ ಬರೆಹ ಇವರ ಹವ್ಯಾಸ. ನಾಟಕಗಳ ರಚನೆ, ನಿರ್ದೇಶನ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನನ್ನಿ (ಕಾದಂಬರಿ) ಗ್ರಸ್ತ (ಕಾದಂಬರಿ), ಪುರಹರ (ನಾಟಕ), ಕರ್ಮ (ಕಾದಂಬರಿ) ...
READ MORE