ತ.ರಾ.ಸು ಅವರ ಕಾದಂಬರಿ ‘ಭಾಗ್ಯಶಿಲ್ಪಿ’. ಈ ಮೊದಲು ತ.ರಾ.ಸು ಅವರು ರಚಿಸಿದ್ದ ಮಾರ್ಗದರ್ಶಿಯ ಮುಂದುವರಿದ ಭಾಗ ಭಾಗ್ಯಶಿಲ್ಪಿ. ಗ್ರಾಮೋದ್ಧಾರ ಕಾರ್ಯವನ್ನೇ ತನ್ನ ಬಾಳಿನ ಆಶಯವಾಗಿಟ್ಟುಕೊಂಡ ಯುವಕನ ಬಾಳು, ಹೊಯ್ದಾಟದ ಕಾಲವನ್ನು ಮುಗಿಸಿ, ಕರ್ತವ್ಯ ರಂಗಕ್ಕೆ ಇಳಿಯುವ ಘಟ್ಟ ಆ ಆದರ್ಶವನ್ನು ಪ್ರತಿಭಟಿಸುವ ಪ್ರತಿಗಾಮೀ ಶಕ್ತಿಗಳ ಚಿತ್ರಣ ಈ ಭಾಗದಲ್ಲಿದೆ.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE