ನವಿಲ ಕರುಣೆ ರಾಧೇಶ ತೋಳ್ಪಾಡಿ.ಎಸ್ ಅವರು ಮಕ್ಕಳಿಗಾಗಿ ಬರೆದ ಕಾದಂಬರಿಯಾಗಿದೆ. ರಾಧೇಶ ತೋಳ್ಪಾಡಿ ತಮ್ಮ ಮಕ್ಕಳ ಕವಿತೆಗಳಿಂದ ಈಗಾಗಲೇ ಬಾಲ ಜಗತ್ತಿಗೆ ಪ್ರಿಯರಾದವರು, ಅವರ ಪದ್ಯದಷ್ಟೇ ಆಕರ್ಷಕ ಅವರ ಗದ್ಯ ಎಂಬುದನ್ನು ಅವರು ಈ ಸಂಪುಟಕ್ಕಾಗಿಯೇ ಬರೆದ 'ನವಿಲ ಕರುಣೆ’ ಸ್ಥಾಪಿಸುತ್ತದೆ, ಈ ಕಿರುಕಾದಂಬರಿಯಲ್ಲಿ ಕಾಣುವ ರಮ್ಯ ಕಲ್ಪನೆ, ಪ್ರಾಣಿಪ್ರಪಂಚದ ಬಗೆಗಿನ ಅದಮ್ಯ ಅಕ್ಕರೆ, ಇಕಾಲಜಿಯ ಎಚ್ಚರ, ಮಕ್ಕಳ ಮೇಲೆ ಸಕಾರಾತ್ಮಕ ಪ್ರಭಾವ ಬೀರುವ ಕಾರಣ ಈ ಕೃತಿ ಮಕ್ಕಳ ಸಾಹಿತ್ಯಕ್ಕೆ ಅಪರೂಪದ ಕೊಡುಗೆಯಾಗಿದೆ ಎಂದು ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡದ ಶಾಂತಿಗೋಡಿನಲ್ಲಿ 1969ರಲ್ಲಿ ಜನಿಸಿದ ರಾಧೇಶ ತೋಳ್ಪಾಡಿಯವರು ಇಂಗ್ಲಿಷಿನಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಬಂಟ್ವಾಳ ತಾಲೂಕಿನ ವಾಮಪದವಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶ್ರೀಯುತರು ಮಕ್ಕಳಿಗಾಗಿ ಸೊಗಸಾದ ಕವಿತೆಗಳು ಹಾಗೂ ನಾಟಕಗಳನ್ನು ಬರೆದಿದ್ದಾರೆ. 'ಬಿಸಿಲಿನ ದೊರೆಗೆ ನೆರಳಿನ ಮನೆ', 'ಹಲೋ ಹಲೋ ಚಂದಮಾಮ, 'ತುಂಟ ಗಾಳಿ ಕೈಯಲ್' ಮತ್ತು 'ರೈಲು ರೈಲು ಅಲಸಂಡೆ' ಇವರ ಮಕ್ಕಳ ಕವಿತೆಗಳಾದರೆ 'ಲಂಕೆಯ ರಕ್ಕಸ ಪಿಳ್ಳೆಗಳು' ಮಕ್ಕಳ ನಾಟಕ. ಪ್ರಜಾವಾಣಿ ದೀಪಾವಳಿ ವಿಶೇಷಾಂಕವೂ ಸೇರಿದಂತೆ ಹಲವಾರು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಇವರ ಶಿಶು ಕಾವ್ಯಕ್ಕೆ ಬಹುಮಾನಗಳು ಸಂದಿರುವುದು ಇವರು ...
READ MORE