`ಮಹಾಕಾಲ’ ಜಿ.ಬಿ ಹರೀಶ ಅವರ ಇತಿಹಾಸ ಕುರಿತ ಕಾದಂಬರಿಯಾಗಿದೆ. ಇಪ್ಪತ್ತನೆಯ ಶತಮಾನದ ಭಾರತದ ಹಾಗೂ ಏಷ್ಯಾಖಂಡದ ಅಂತಸ್ವತ್ತ್ವ, ರಾಜಕೀಯ ಸಂಚುಗಳನ್ನು ಸಮಸ್ತ ಐತಿಹಾಸಿಕ ದಾಖಲೆಗಳ ಆಧಾರದಲ್ಲಿ ಐತಿಹಾಸಿಕ ಕಥನ ರೂಪದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ -ಭಾರತೀಯ ಇತಿಹಾಸದ ಧ್ರುವತಾರೆ, ಅವರು ರಾಜಕೀಯವಾಗಿ ಕ್ರಿಯಾಶೀಲರಾಗಿದ್ದ ಅಲ್ಪ ಸಮಯದಲ್ಲೇ ತನ್ನ ಖಚಿತ ನಿರ್ಧಾರ, ನಿಶಿತಮತಿಗಳಿಂದ ಒಂದು ಹೊಸ ಸಂಚಲನವನ್ನೇ ಸೃಷ್ಟಿಸಿದರು. ನೇತಾಜಿ ಬದುಕಿನ ಅನೇಕ ಅದ್ಭುತ, ಅಪ್ರಕಟಿತ, ರೋಚಕ ಘಟನಾವಳಿಗಳನ್ನು ಪೋಣಿಸಿ ಬರೆದ ಕಾದಂಬರಿ ಇದಾಗಿದೆ.
ಜಿ.ಬಿ ಹರೀಶ್ ಅವರು ಹೊಸ ತಲೆಮಾರಿನ ಗಂಭೀರ ವಿಮರ್ಶಕರಲ್ಲಿ ಒಬ್ಬರು. ಕನ್ನಡ ಕಾವ್ಯಗಳು, ಜೈನ, ಬೌದ್ಧ ಮತ್ತು ಶಾಸ್ತ್ರ ಸಾಹಿತ್ಯ ವಿಷಯಗಳಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಮೈಸೂರು ವಿ.ವಿ.ಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡ ಇವರು ದೇವಚಂದ್ರನ ರಾಜಾವಳಿ ಕಥಾಸಾರ: ಜೈನ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಧ್ಯಯನ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರ ಇವರ ಆಸಕ್ತಿಯ ಕ್ಷೇತ್ರಗಳು, ತುಮಕೂರು ವಿ.ವಿ., ಬೆಂಗಳೂರಿನ ಶೇಷಾದ್ರಿಪುರಂ ಸ್ನಾತಕೋತ್ತರ ಕೇಂದ್ರ, ಎಂ.ಇ.ಎಸ್. ಸ್ನಾತಕೋತ್ತರ ಕೇಂದ್ರ, ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ ಸೇರಿದಂತೆ ಹಲವು ...
READ MORE