`ಹದ್ನಾರಾಣೆ ಪ್ರೇಮ’ ಬೇಲೂರು ರಾಮಮೂರ್ತಿ ಅವರ ಹಾಸ್ಯಮಯ ಕಾದಂಬರಿಯಾಗಿದೆ. ಇದೊಂದು ಹಾಸ್ಯಮಯ ಕಾದಂಬರಿ. ತಂದೆಗೆ ತನಗೆ ಸೊಸೆಯಾಗಿ ಬರೋಳು ಹೆಂಡತಿಯ ಹಾಗೆ ಸಂಪ್ರದಾಯಸ್ಥ ಕುಟುಂಬದಿಂದ ಬಂದಿರಬೇಕು ಎನ್ನುವ ಆಸೆ. ಮಗ ಪಾಪುಗೆ ಅವನ ಹೆಂಡತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ಕೊಟ್ಟು ವಿದೇಶಕ್ಕೆ ಹೋದಾಗ ಇಲ್ಲಿ ಒಬ್ಬ ಹೈ ಟೆಕ್ ಕುಟುಂಬದ ಮತ್ತು ಬಹಳ ಮಾಡರ್ನ್ ಆದ ಹುಡುಗಿ ರಮ್ಯಳನ್ನು ಪ್ರೀತಿಸಿ ಮದುವೆಯನ್ನೂ ಆಗಿಬಿಡುತ್ತಾನೆ. ತಂದೆ ವಿದೇಶದಿಂದ ಬರುವಾಗ ಸಂಪ್ರದಾಯಸ್ಥ ಹುಡುಗಿಯನ್ನು ತೋರಿಸಬೇಕು. ಆದರೆ ರಮ್ಯ ಅದಕ್ಕೆ ಒಪ್ಪುವುದಿಲ್ಲ. ಪ್ರೀತಿಸಿ ಮದುವೆಯಾಗಿರುವ ರಮ್ಯಳನ್ನೂ, ಸಂಪ್ರದಾಯಸ್ಥ ಹುಡುಗಿಯೇ ಸೊಸೆಯಾಗಬೇಕು ಎಂದು ಹಠ ಹಿಡಿದಿದ್ದ ತಂದೆಯನ್ನೂ ಪಾಪು ಹೇಗೆ ಸಮಾಧಾನ ಮಾಡುತ್ತಾನೆ, ಅದಕ್ಕೆ ಏನೇನೆಲ್ಲ ಕಸರತ್ತು ಮಾಡುತ್ತಾನೆ. ಅವನಿಗೆ ಈ ಹಂತದಲ್ಲಿ ಸ್ನೇಹಿತ ಮುರಾರಿ ಮತ್ತು ಕವಿತ ಹೇಗೆ ಸಹಾಯ ಮಾಡಿದರು. ಅಂತಿಮವಾಗಿ ತಂದೆ ರಮ್ಯಳನ್ನು ಹೇಗೆ ಒಪ್ಪಿಕೊಂಡರು ಎನ್ನುವುದು ಈ ಕಾದಂಬರಿಯ ಸ್ವಾರಸ್ಯ. ಮೊದಲಿಂದ ಕೆಡೆಯವರೆವಿಗೂ ಕುತೂಹಲಕಾರೀ ಘಟನೆಗಳು, ಕಚಗುಳಿಯಿಡುವ ಮಾತುಗಳಿಂದ ತುಂಬಿರುವ ಕಾದಂಬರಿ ಹದ್ನಾರಾಣೆ ಪ್ರೇಮ.
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...
READ MORE