ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಬರೆದ ಕಾದಂಬರಿ-ಬಾಲ ಗೋಪಾಲ. ಬಾಲೆಗೆ ಮದುವೆ ನಿಶ್ಚಯವಾಗಿರುತ್ತದೆ. ಅವಳನ್ನು ನೋಡಲು ಬಂದ ವರ ರಾತ್ರಿ ಬಂದು ಅವಳೊಡನೆ ಸರಸವಾಡುತ್ತಾನೆ. ನಂತರ ಆತ ಶವವಾಗಿ, ಅಂತ್ಯ ಸಂಸ್ಕಾರ ನಡೆಸಲು 14 ದಿನಗಳವರೆಗೆ ಕಪಾಟಿನಲ್ಲಿಟ್ಟು, ಬೆಕ್ಕು ಹಾಲು ಕುಡಿಯುವ ಬೋಗುಣಿಯಲ್ಲಿ ಆತನಿಗೂ ಉಣಿಸುತ್ತಿರುವ ಪ್ರಸಂಗವು ಅಲೌಕಿಕ ಎನ್ನಿಸುವಂತೆ ಮೂಡಿಬಂದಿದೆ.
ಈ ಯುವತಿ ಅಪ್ಪನಿಗೂ ಸಂಶಯ. ಅತ್ತ ವರನಿಗೂ ಏನೋ ಆದ ಭಯ. ಹೆಸರು ಗವಿಶ್ವರ ಸ್ವಾಮಿ. ಹೆಸರಿನಂತೆಯೇ ಆತ ಕುಗ್ಣಗಿ ಕೊನೆಗೊಂದು ದಿನ ಅಂತರ್ಗತನಾಗುತ್ತಾನೆ.ಹೀಗೆ ಲೌಕಿಕ-ಅಲೌಕಿಕಗಳ ಮಧ್ಯೆ ಪ್ರಸಂಗಗಳು ಜರುಗುವಂತ ತಂತ್ರಗಳ ನಾಟಕಗಳು ಕನ್ನಡ ಸಾಹಿತ್ಯದಲ್ಲಿ ಕಡಿಮೆ. ಒಟ್ಟಿನಲ್ಲಿ, ತುಂಬಾ ಪರಿಣಾಮಕಾರಿಯಾಗಿ ನಾಟಕ ಸಂಭಾಷಣೆಗಳು ಸಹ ಮೂಡಿಬಂದಿವೆ.
ಖ್ಯಾತ ರಂಗಕರ್ಮಿ ಪ್ರಸನ್ನ ಅವರು ಜನಿಸಿದ್ದು ಮಾರ್ಚ್ 23, 1951 ರಂದು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯಲ್ಲಿ. ತಂದೆ ಪ್ರಹ್ಲಾದಾಚಾರ್ಯ, ತಾಯಿ ಹೇಮಾವತಿ ಬಾಯಿ. ಸೆಂಟ್ರಲ್ ಕಾಲೇಜಿನಿಂದ ಎಂ.ಎಸ್ಸಿ. ಪದವಿ ಪಡೆದವರು. ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು. ಪ್ರಸನ್ನರು ದೆಹಲಿಯ ನಾಟಕ ಶಾಲೆಯಲ್ಲಿದ್ದ ದಿನಗಳಲ್ಲಿ ನಿರ್ದೇಶಿಸಿದ ನಾಟಕಗಳಲ್ಲಿ ಗಾಂಧಿ, ಉತ್ತರ ರಾಮಚರಿತಂ, ಅಗ್ನಿ ಔರ್ ಬರ್ ಕಾ, ಫ್ಯೂಜಿಯಾಮ ಪ್ರಮುಖವಾದವು. ಇಂಗ್ಲಿಷ್, ಹಿಂದಿ, ಕನ್ನಡ ಭಾಷೆಗಳ ಮೇಲೆ ಅವರು ಪ್ರಭುತ್ವ ಸಾಧಿಸಿದ್ದರು. ರಾಷ್ಟ್ರೀಯ ನಾಟಕಶಾಲೆಯಲ್ಲಿ ಕೆಲಕಾಲ ಬೋಧನೆ ಮಾಡಿ, ರಂಗಭೂಮಿ ಅಧ್ಯಯನಕ್ಕಾಗಿ ...
READ MORE