ಮನುಷ್ಯನ ಹುಟ್ಟು - ಬದುಕು - ಸಾವು ಇವುಗಳ ನಂತರದ ಆತ್ಮ ಸ್ಥಿತಿ ಎಲ್ಲವೂ ಈ ಕಾದಂಬರಿಯಲ್ಲಿದೆ. ಗರುಡ ಪುರಾಣದ ಉಲ್ಲೇಖಗಳನ್ನು ತಿಳಿಸುವ ಕೆಲಸ ಬೇದೂರು ಸರ್ ಮಾಡಿದ್ದಾರೆ. ಆತ್ಮ - ಪರಮಾತ್ಮ - ದೈವ ಲೀಲೆ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.ಮನುಷ್ಯ ಹೇಗೆ ಬದುಕಬೇಕು ಸನ್ಮಾರ್ಗದಲ್ಲಿ ಹೇಗೆ ನಡೆಯಬೇಕು. ಸಂಸ್ಕೃತಿ - ಸಂಸ್ಕಾರಗಳು ಹೇಗೆ ಬೆಳಸಿಕೊಳ್ಳಬೇಕೆಂಬುವುದನ್ನು ಅತಿ ಸೂಕ್ಷ ರೀತಿಯಲ್ಲಿ ಸಮಾಜಕ್ಕೆ ಕೃತಿಯ ಮೂಲಕ ತಿಳಿಹೇಳಿದ್ದಾರೆ. ಪಾತ್ರಗಳು ಕಲ್ಪನೆಯಲ್ಲಿದ್ದರು ಪಾತ್ರಗಳು ಮಾತಾಡುತ್ತವೆ.
ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್ ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು. ...
READ MORE