ದ್ವೈತ

Author : ರಾಘವ್

Pages 126

₹ 140.00




Year of Publication: 2022
Published by: ವೀರಲೋಕ ಬುಕ್ಸ್‌
Address: ಚಾಮರಾಜಪೇಟೆ ಬೆಂಗಳೂರು 560018
Phone: 070221 22121

Synopsys

ದ್ವೈತ ಕಾದಂಬರಿಯ ಆರಂಭವೇ ಕುತೂಹಲಕಾರಿ. ಯಾರೀ ಲೇಖಕ? ಆತನ ಹೆಂಡತಿಗಾಗಿ ಹೂ ಕೊಳ್ಳುತ್ತಾನೆ. ಅವಳ ಸಮಾಧಿಯ ಮೇಲೆ ಆ ಹೂ ಇಡುತ್ತಾನೆ. ಇದೇನು? ಎಂದು ಓದುಗರಾದ ನಾವು ಯೋಚಿಸುವ ವೇಳೆಗೆ ಪರಶು ಎಂಬ ಪ್ರಗಾಢ ಓದುಗ ನಮಗೆ ಪರಿಚಯವಾಗುತ್ತಾನೆ. ಎಲ್ಲಿಯೋ ಬಿಟ್ಟು ಬಂದಿದ್ದ ಅವನ ಮೆಚ್ಚಿನ ಲೇಖಕ ರಾಜೀವ್ ವರ್ಮ ಸಾಯುವ ಮೊದಲು ಅರ್ಧ ಬರೆದಿದ್ದ ಪುಸ್ತಕ 'ದ್ವೆತ' ಮರಳಿ ಅವನ ಮನೆಯಲ್ಲೇ ಬಂದಿರುತ್ತದೆ. ಅವನೂ, ಅವನ ಸಹಪಾಠಿಗಳ ಗುಂಪೂ ಪುಸ್ತಕವನ್ನು ದೂರ ಮಾಡಿದರೂ ಮತ್ತೆ ಅದು ಪರಶುವಿನ ಬಳಿ ಬಂದಿರುತ್ತದೆ. ಇದು ಕೇವಲ ಆರಂಭ ನೈಜ ಕಾದಂಬರಿ ಬರೆಯಬೇಕು ಎನ್ನುವ ಲೇಖಕ, ಅದಕ್ಕಾಗಿ ಅವನು ಸೇರುವ ಮಾನಸಿಕ ಆಸ್ಪತ್ರೆ. ಅಲ್ಲಿನ ಡಾ. ಹೇಮಂತ ಲೇಖಕನ ಆಶಯ ಈಡೇರಿಸಲು ನಿರ್ಧಾರ ಮಾಡುವುದು. ದುಷ್ಟರ ಗುಂಪು ಡಾ. ನವೀನ್ ಮತ್ತು ಇನ್ಸ್‌ಪೆಕ್ಟರ್ ಗೌರೀಶ್ ತನ್ನ ವಿದ್ಯಾರ್ಥಿಗಳನ್ನು ರಕ್ಷಿಸಲು ಯತ್ನಿಸುವ ಪ್ರಿನ್ಸಿಪಾಲ್ ಫರ್ನಾಂಡಿಸ್ ಇಚ್ಚಿತ್ತ ಮನೋಭಾವ ಕೊಲೆ ಸಮಾಧಿ ತೋಡುವಿಕೆ ಕೆಲವು ಜನರ ಸ್ವಭಾವ ಬದಲಾಗುವ ರೀತಿ ಕೊಲೆಯಾದ ವ್ಯಕ್ತಿ ಮತ್ತೆ ಬಂದನೇ ಮತ್ತು ಬಹಳ ರಹಸ್ಯಮಯ ಅಂತ್ಯ ಎನ್ನುವುದು ಓದುಗರ ಅಭಿಪ್ರಾಯವಾಗಿದೆ.

About the Author

ರಾಘವ್

ಲೇಖಕ ರಾಘವ್ ಅವರು ಗಣಕ ಯಂತ್ರ ವಿಭಾಗದಲ್ಲಿ ಪದವೀಧರರು. ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿರುವ ಅವರು ಸಣ್ಣ ಕಥೆಗಳು, ಕವಿತೆಗಳು ಸೇರಿದಂತೆ ಏಳೆಂಟು ಕಾದಂಬರಿಗಳು ಪ್ರತಿಲಿಪಿ ಆನ್ಲೈನ್ ಅಪ್ಪ್ಲಿಕೇಶನ್ ನಲ್ಲಿ ಪ್ರಕಟವಾಗಿರುತ್ತವೆ. ಅನುಪಮಾ, ಒಲವಿನ ಆಸರೆ, ಸಂಕಲ್ಪ, ಗರುಡ ರಹಸ್ಯ, ಗೋವರ್ಧನ್ ಎಸ್ಟೇಟ್, ಘರ್ಷಣೆ, ಮುಂತಾದ ಇವರ ಹೆಸರಾಂತ ಹಾರರ್ ಥ್ರಿಲ್ಲರ್ ಕಾದಂಬರಿಗಳು ಹೆಚ್ಚಿನ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ . ಕೃತಿಗಳು: ದ್ವೈತ  ...

READ MORE

Related Books