ರಮೇಶ ಈ ಕಾದಂಬರಿಯ ಪ್ರಧಾನ ಪಾತ್ರಧಾರಿ. ಹಳ್ಳಿಯ ಯುವಕ ತನಗಾಗಿ ಜೀವತೇದು, ಸಾಕಿ, ಸಲಹಿ, ವಿದ್ಯೆ ಕಲಿಸಿ ದೊಡ್ಡವನನ್ನಾಗಿ ಮಾಡಿದ ತಾಯಿ ಯಮುನಾಳ ಸಾವಿನಿಂದ ಕಂಗಾಲಾಗುತ್ತಾನೆ. ತನ್ನದೂ ಎಂಬ ಯಾವ ಆಸ್ತಿಯೂ ಇರುವುದಿಲ್ಲ. ಇದ್ದ ಒಂದು ಹಳೇ ಮನೆಯನ್ನೂ ತಾಯಿ ಮಾಡಿದ್ದ ಸಾಲಕ್ಕಾಗಿ ಊರಿನ ಪಟೇಲ ಕಿತ್ತುಕೊಳ್ಳುತ್ತಾನೆ. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಅವನು ತನ್ನ ನಿರುದ್ಯೋಗದ ಸಮಸ್ಯೆಯನ್ನು ನೀಗಿಸಿಕೊಂಡು ಜೀವನ ನಡೆಸಲು ಎಷ್ಟೆಲ್ಲ ಕಷ್ಟ ಪಡುತ್ತಾನೆ, ಯಾವ ಯಾವ ರೀತಿಯ ಪರೀಕ್ಷೆಗೊಳಪಡುತ್ತಾನೆ ಎಂಬುದೇ ಈ ಕಾದಂಬರಿಯ ಸಾರಾಂಶ.
ಡಿ. ಎನ್. ಕೃಷ್ಣಮೂರ್ತಿಯವರು ಮೈಸೂರು ತಾಲ್ಲೂಕಿನ ದೊಡ್ಡಮಾರಗೌಡನಹಳ್ಳಿ ಯವರು. ತಂದೆ ಎಸ್. ನಂಜುಂಡಯ್ಯ, ತಾಯಿ ಶಾರದಮ್ಮ. ಸಾಹಿತ್ಯ ವಲಯದಲ್ಲಿ ಇವರು ಡಿಎನ್ಕೆ ಎಂದೇ ಪರಿಚಿತರು. ಕೃತಿಗಳು: ದತ್ತೂರಿಗಿಡ, ಮರೀಚಿಕೆ, ಪರಿವರ್ತನೆ, ಕರ್ಪೂರದ ಗೊಂಬೆ, ಮುಳುಗಿದ ದೋಣಿ,(ಕಿರು ಕಾದಂಬರಿಗಳು), ಜನಮನ (ಪ್ರಬಂಧ ಸಂಕಲನ-ಸಂಪಾದಿತ), ಓಕುಳಿ, ಬೆಳಕು (ಕವನ ಸಂಕಲನ), ಚೈತ್ಯ ಚೈತ್ರ(ಕವನ ಸಂಕಲನ-ಸಂಪಾದಿತ), ರಾಜಯೋಗಿ (ವಚನ ಸಂಕಲನ), ಶಾಂತಿಭೂಮಿ, ತಪಸಹನ, ಸೂರ್ಯಾಸ್ತಮ, ವಸುಂಧರ, ಮಣ್ಣಿನ ಋಣ, ಹೃದಯವಂತ, ಆಕ್ರಂದನ, ಚೈತ್ರಯಾತ್ರೆ, ಗ್ರಾಮಾಂತರ, ಕರ್ಮಭೂಮಿ (ಕಾದಂಬರಿಗಳು), ನೇಸರ (ಕವನ ಸಂಕಲನ), ಕಾವ್ಯ ಕುಸುಮಾಂಜಲಿ-(ಕವನ ಸಂಕಲನ - ಸಂಪಾದಿತ), ಸಂಘರ್ಷಣೆ (ಕಥಾ ಸಂಕಲನ), ಜೀವನದಿ, (ಲೇಖನಗಳು), ಮಹಾಸಾಗರದ ಮುತ್ತುಗಳು (ವ್ಯಕ್ತಿ ಚಿತ್ರಗಳು -ಸಂಪುಟ 1), ಭಾರತದ ಅನರ್ಘ್ಯ ರತ್ನಗಳು- (ವ್ಯಕ್ತಿ ಚಿತ್ರಗಳು - ಸಂಪುಟ 2), ಮಾತೃಭೂಮಿಯ ಮಾಣಿಕ್ಯಗಳು (ವ್ಯಕ್ತಿ ಚಿತ್ರಗಳು - ಸಂಪುಟ 3), ಕನ್ನಡ ಸಾಹಿತ್ಯದ ಸೀಮಾಪುರುಷ (ಮಾಸ್ತಿ ...
READ MORE