‘ಜಾಲಿಯ ನೆರಳು’ ಲೇಖಕಿ ಸರಸಮ್ಮ ಅವರ ಸಾಮಾಜಿಕ ಕಾದಂಬರಿ. ಕೃತಿಯ ಕುರಿತು ತಿಳಿಸುತ್ತಾ ‘ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹುಮುಖ್ಯ. ಆ ನಿಟ್ಟಿನಲ್ಲೇ ಅನಾದಿಕಾಲದಿಂದಲೂ ಹೆಣ್ಣಿಗೆ ಪ್ರಥಮ ಸ್ಥಾನ ನೀಡಿ ಗೌರವಿಸುತ್ತಿರುವುದು. ಏಕೆಂದರೆ ಇನ್ನೊಂದು ಜೀವವನ್ನು ತನ್ನ ಗರ್ಭದಿಂದ ಸೃಷ್ಟಿ ಮಾಡುವ ಸೃಷ್ಟಿಕರ್ತಳು.
ಈ ಪ್ರಪಂಚದ ಸೃಷ್ಟಿಕರ್ತನು ಮೇಲಿರುವನು ಆತನೂ ಒಂದು ತಾಯಿಯ ಗರ್ಭದ ಶಿಶುವೆ, ಕಣ್ಣಿಗೆ ಕಾಣುವ ದೇವರೇ ಅಮ್ಮ, ಈ ತಾಯಿ ತನ್ನ ಮಗುವಿನ ಏಳೆಗಾಗಿ ತನ್ನ ಸುಖ ಸಂತೋಷ ಗಳನ್ನು ತ್ಯಾಗ ಮಾಡುವ ತ್ಯಾಗ ಮೂರ್ತಿ 'ಹೆಣ್ಣೆ ಸಂಸಾರದ ಕಣ್ಣೆಂದು ಅನುಭವಿಗಳು ಹೇಳುವ ಮಾತು, ಸಂಸಾರ ನಿರ್ವಹಣೆಯಲ್ಲಿ ತನ್ನ ಕಷ್ಟ, ನೋವು, ಸಂಕಟ, ಯಾತನೆ ಎಲ್ಲವನ್ನು ಲೆಕ್ಕಿಸದೆ ಮನೆಮಂದಿಯ ಆರೈಕೆಯಲ್ಲಿ ತನ್ನ ಜೀವಮಾನ ಕಳೆಯುತ್ತಾಳೆ. ಆದರೆ ಇದಕ್ಕೆ ಪ್ರತಿಫಲವಾಗಿ ಅವಳು ಏನನ್ನು ಬಯಸುವುದಿಲ್ಲ. ಕೇವಲ ಒಂದು ಮೆಚ್ಚುಗೆಯ ನುಡಿ ಯನ್ನು ಮಾತ್ರ ಕೋರುತ್ತಾಳೆ. ಅದನ್ನು ಒಂದು ಮುಗುಳು ನಗೆಯೊಂದಿಗೆ ನೀಡಿದರೆ ಸಾಕು, ಆಗ ಅವಳಿಗೆ ಇಡೀ ಪ್ರಪಂಚವನ್ನೇ ಗೆದ್ದಷ್ಟು ಸಂತೋಷವಾಗುತ್ತದೆ ಎಂದಿದ್ದಾರೆ ಸರಸಮ್ಮ.
ಹಾಗೇ ಸ್ವಾರ್ಥಿಯಾದ ಗಂಡು ಅದನ್ನು ಸಹ ದಾರಾಳವಾಗಿ ನೀಡಲು ಜಿಪುಣುತನವ ತೋರಿಸುತ್ತಾನೆ. ಕಾರಣ ತನ್ನ ಸ್ವಾಭಿಮಾನಕ್ಕೆಲ್ಲಿ ಧಕ್ಕೆ ಉಂಟಾಗುತ್ತದೋ ಎಂದು ಬಿಗುಮಾನ ತೋರಿಸುತ್ತಾನೆ. ಇಷ್ಟಾದರೂ ಹೆಣ್ಣು ತನ್ನ ಕರ್ತವ್ಯಕ್ಕೆ ಒಂದಿಷ್ಟು ಲೋಪವಾಗದಂತೆ ನಿರ್ವಹಿಸುತ್ತಾಳೆ ಇಂಥ ಸೂಕ್ಷ್ಮ ಎಳೆಯನ್ನಿಟ್ಟುಕೊಂಡೆ ಈ ಕಾದಂಬರಿ ರಚಿಸಲಾಗಿದೆ.
ಲೇಖಕಿ ಎ. ಸರಸಮ್ಮ ಅವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಸಾಹಿತ್ಯ ಅವರ ವಿಶೇಷ ಆಸಕ್ತಿಯಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಪ್ರಸ್ತುತ ನಿವೃತ್ತರಾಗಿದ್ದರೆ. ಕೃತಿಗಳು: ಮೋಸದ ಜಾಲ(ಕಾದಂಬರಿ), ಬಾಡಿಗೆ ಮನೆ, ಮನೆ ಮಗ, ನೀತಿ ಕಥೆಗಳು, ದನಗಳ ಚೆನ್ನಿ, ನಂದಾದೀಪ, ಜಾಲಿಯ ನೆರಳು, ಕಾವ್ಯ ಜ್ಯೋತಿ, ವಿಧಿ ನಿಯಮ, ಸನ್ಮಾರ್ಗ, ಹೆಣ್ಣಿನ ಬಾಳು, ಗುರಿ, ಪಾಪ ಪುಣ್ಯ, ಭಕ್ತಿಸಾರ, ಸ್ನೇಹ ಬಂಧನ, ಕಾಮನಬಿಲ್ಲು, ಮೋಸದ ಜಾಲ ...
READ MORE