ಲೇಖಕಿ ಕೆ. ತಾರಾ ಭಟ್ ಅವರ ಕಾದಂಬರಿ ಕೃತಿ ʻಅವ್ಯಕ್ತʼ. ಮನುಷ್ಯರು ಸೋತಾಗಲೆಲ್ಲಾ ಅವರ ಅಸಹಾಯಕತೆಯನ್ನೇ ಇತರರು ಉಪಯೋಗಿಸಿ ಮನುಷ್ಯರೇ ಮನುಷ್ಯರನ್ನು ಹಣಿಸುತ್ತಾ ಎದ್ದೇಳದಂತೆ ನೋಡುವುದು ಮಾನವಕುಲದಲ್ಲಿ ಕಂಡುಬರುವ ಒಂದು ಸಾಮಾನ್ಯ ಸಂಗತಿ. ಒಬ್ಬನ ಗೆಲುವನ್ನು ಸಹಿಸಲಾಗದೆ ಆದರೆ ಅದನ್ನು ಮುಖದಲ್ಲಿ ತೋರಿಸದೆ ಸಮಾಜದಲ್ಲಿ ತಲೆ ಎತ್ತಿ ನಡೆಯುವವರು ಹಲವರು. ಹಾಗಾಗಿ ಮನಸ್ಸಿನಲ್ಲಿ ಹೊಳಹುಹಾಕಿದ ಈ ಎಲ್ಲಾ ವಿಚಾರಗಳನ್ನು ಒಟ್ಟುಗೂಡಿಸಿ ಲೇಖಕರು ಕತೆಯನ್ನು ಹೆಣೆದಿದ್ದಾರೆ.
ಕಥೆಗಾರ್ತಿ, ಕಾದಂಬರಿಗಾರ್ತಿ ತಾರಾ ಭಟ್ ಅವರು 1944 ಸೆಪ್ಟಂಬರ್ 03 ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಜನಿಸಿದರು. ‘ಅವ್ಯಕ್ತ, ಲೋಟಸ್ ಪಾಂಡ್’ ಅವರ ಪ್ರಸಿದ್ಧ ಕಾದಂಬರಿಗಳು. ‘ಹೊಕ್ಕಳ ಬಳ್ಳಿ, ಸರ್ವಾಧಿಕಾರಿ, ಪಂಚಶತ್ತಮ’ ಎಂಬ ನಾಟಕಗಳು, ’ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ, ಬೋಳು ಮರದ ಕೊಂಬೆಗಳು, ಸರಿದು ಹೋದ ಕಾಲ’ ಕಥಾಸಂಕಲನಗಳನ್ನು ರಚಿಸಿದ್ದಾರೆ. ‘ಲೋಟಸ್‌ಪಾಂಡ್’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ’, ರಾಮಮನೋಹರ ದತ್ತಿನಿಧಿ ಪ್ರಶಸ್ತಿ ಲಭಿಸಿದೆ. ಅವರ ’ಅವ್ಯಕ್ತ’ ಕಾದಂಬರಿಗೆ ಪುತ್ತೂರು ಕರ್ನಾಟಕ ಸಂಘದಿಂದ ಉಗ್ರಾಣ ಪ್ರಶಸ್ತಿ ಲಭಿಸಿದೆ. ...
READ MORE