‘ಬೆಳ್ಳಿ ಚುಕ್ಕಿ’ ಎ. ಪಿ. ಮಾಲತಿ ಅವರ ಕಾದಂಬರಿಯಾಗಿದೆ. “ಬದುಕು ಗಣಿತದ ಸೂತ್ರಗಳ ಲೆಕ್ಕಾಚಾರದಂತೆ ಒಂದು ಅಂಕೆ ತಪ್ಪಿದರೆ ಇಡೀ ಸೂತ್ರವೇ ತಪ್ಪಿಹೋಗುತ್ತದೆ" ಎಂಬ ಕಾದಂಬರಿಯ ಕೇಂದ್ರ ಪಾತ್ರ ವಸಂತಿ ಹೇಳುವ ಮಾತು ಕಾದಂಬರಿಯ ಆಶಯವನ್ನು ಹೇಳುವಂತದ್ದು. ಬದುಕಿನ ಬವಣೆಗಳನ್ನು, ಕ್ಲಿಷ್ಟ ಸಮಸ್ಯೆಗಳನ್ನು ತಾಳ್ಮೆಯಿಂದ ಧೈರ್ಯದಿಂದ ಅಂತಃಕರಣದಿಂದ ಬಿಡಿಸುತ್ತಾ ಸಾಗಬೇಕೇ ಹೊರತು ಕೋಪತಾಪ ಆತುರದ ನಿರ್ಧಾರಗಳು ಬದುಕನ್ನು ಹಾಳುಗೆಡವುತ್ತವೆಂಬುದನ್ನು ಲೇಖಕಿ ಮಾಲತಿಯವರು ಈ ಕಾದಂಬರಿಯ ಮೂಲಕ ಚಂದದಲ್ಲಿ ಕಟ್ಟಿಕೊಡುತ್ತಾರೆ. ಯುವ ಮನಸ್ಸುಗಳು ಎದುರಿಸುವ ಅನೇಕ ಸಂಘರ್ಷಗಳಿಗೆ ಪ್ರೀತಿ ಬೆಂಬಲ ಪ್ರೋತ್ಸಾಹದ ಕೊರತೆ ಕಾರಣವಾಗಿರುವುದನ್ನು ಕುರಿತು ಹೇಳುವ ಲೇಖಕಿ, ಹಾಗೆಯೇ ಅತೀ ಕೊಂಡಾಟ ಕೂಡಾ ಅವರನ್ನು ದಿಕ್ಕುಗೆಡಿಸುತ್ತದೆ ಎಂಬ ಪ್ರಸ್ತುತ ಸಮಾಜದ ಜ್ವಲಂತ ಸಮಸ್ಯೆಯನ್ನು ಇಲ್ಲಿ ಕುತೂಹಲಕಾರಿಯಾಗಿ, ಆಪ್ತವಾಗಿ ಚಿತ್ರಿಸಿದ್ದಾರೆ. ತಲ್ಲಣಗಳನ್ನು ಎದುರಿಸುವ, ಅದರಿಂದ ಹೊರಬರುವ ಮಾರ್ಗಗಳನ್ನು ಕಥಾನಕ ಸರಳ, ಸುಂದರವಾಗಿ ಚಿತ್ರಿಸಿದರೂ, ಬದುಕೆಂಬುದು ಅಷ್ಟು ಸಲೀಸಲ್ಲ, ಅನೂಹ್ಯವಾದದ್ದು ఎంబ ಧ್ವನಿಯೂ ಅಂತರ್ಗತವಾಗಿದೆ. ಆಶಾದಾಯಕ, ಭರವಸೆಯ ದಿಕ್ಕಿನೆಡೆ ಕಥೆ ಮುಖಮಾಡಿರುವುದು ವಿಶೇಷವಾಗಿದೆ
ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...
READ MORE