ಜಯಂತಿ ಮನೋಹರ ಅವರ ‘ಸೀತಾಂತರಂಗ’ ಕಾದಂಬರಿಯು ಸೀತಾ ಚರಿತ್ರೆಯ ವಿಭಿನ್ನ ನೋಟ ಎಂಬ ಉಪಶೀರ್ಷಿಕೆಯನ್ನು ಹೊಂದಿದೆ. ಈ ಕಾದಂಬರಿಯು ಸ್ಮರಣತಂತ್ರ ರೂಪದಲ್ಲಿ ವಾಲ್ಮೀಕಿಯ ಆಶ್ರಮದಲ್ಲಿ ಸೀತೆಯು ನೆನಪಿಸಿಕೊಳ್ಳುವಂತೆ ಇದೆ. ಇದು ಪುರಾಣ ಭಂಜನೆ ಮಾಡುವುದಿಲ್ಲ .ಬದಲಾಗಿ ಅದರ ಅರ್ಥ ವನ್ನು ಬಿಡಿಸಿ ಇಡುತ್ತದೆ.
ಡಾ. ಜಯಂತಿ ಮನೋಹರ್ ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಪ್ರಾಥಮಿಕ ವಿದ್ವಾಂಸವನ್ನು ಪಡೆದಿದ್ದು, ಥಾಯ್ ಲ್ಯಾಂಡ್ ಹಾಗೂ ಕಾಂಬೋಡಿಯಾದಲ್ಲಿ ಭಾರತೀಯರ ಸಂಸ್ಕೃತಿ ಎನ್ನುವುದು ಇವರ ಪ್ರವಾಸ ಕಥನವಾಗಿದೆ. ಜಯಂತಿ ಮನೋಹರ್ 1951 ರ ಅಕ್ಟೋಬರ್ ೨ ರಂದು ಜನಿಸುತ್ತಾರೆ. ಲೇಖಕರ ತಂದೆ ಹೆಸರು ನಾಗರಾಜ್, ತಾಯಿ ಅಮೃತಬಾಯಿ. ಎಸ್.ಬಿ.ಎಂ ಸಂಸ್ಥೆಯಲ್ಲಿ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸುವ ಲೇಖಕಿ ನಂತರದ ದಿನಗಳಲ್ಲಿ ಭಾಷಾ ಅಧ್ಯಯನಕ್ಕೆ ಪ್ರಮುಖ್ಯತೆಯನ್ನು ನೀಡುತ್ತಾರೆ. ನಾಟಕ ಪ್ರದರ್ಶನಗಳೇ ಇವರ ಆಕರ್ಷಣಾ ಕೇಂದ್ರವಾಗಿತ್ತು. ನಾಟಕ ರಚನಾಕಾರರು ಹಾಗೂ ನಿರ್ದೇಶಕರಾಗಿರುವ ಜಯಂತಿ ಮನೋಹರ್ ಅವರ ಪತಿ ಬಿ. ಮನೋಹರ್ ಜೊತೆಯಾಗಿ ರಂಗಭೂಮಿ, ಟಿ.ವಿ ಧಾರವಾಹಿ, ...
READ MORE