ಸರ್ಪಭ್ರಮೆ

Author : ಎಂ.ಆರ್‌. ದತ್ತಾತ್ರಿ

Pages 208

₹ 250.00




Year of Publication: 2024
Published by: ಅಂಕಿತ ಪುಸ್ತಕ
Address: #53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004.
Phone: 080 - 2661 7100 / 2661 7755

Synopsys

‘ಸರ್ಪಭ್ರಮೆ’ ಕೃತಿಯು ಎಂ.ಆರ್. ದತ್ತಾತ್ರಿ ಅವರ ಕಾದಂಬರಿಯಾಗಿದೆ. ಈ ಕೃತಿಯು ಸಾಹಿತ್ಯದ ಅಭಿರುಚಿಯುಳ್ಳ ಅಮೇರಿಕದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವನ ಕುರಿತು ಮಾತನಾಡುತ್ತದೆ. ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; 'ನಾವು ಬರೆದದ್ದನ್ನು ನಾವೇ ಓದುವುದರಲ್ಲೇನಿದೆ ಮಣ್ಣು, ಆಸಕ್ತಿಯಿರುವುದೇ ಬೇರೆಯವರ ವಿಚಾರಗಳಲ್ಲಿ, ಅದೂ ಕದ್ದು ತಿಳಿಯುವುದರಲ್ಲಿ' ಎಂದು ನೀವು ಗೊಣಗಿದರೆ ನಾನದನ್ನು ನಿರಾಕರಿಸಲಾರೆ. ಒಬ್ಬ ಕತೆಗಾರನಾಗಿ ಹೇಗೆ ನಿರಾಕರಿಸಲಿ? ಕತೆ ಬರೆಯು ವುದರ ಮತ್ತೊಂದು ಅರ್ಥವೇ ಮತ್ತೊಬ್ಬರ ಡೈರಿಯನ್ನು ಓದುವುದು, ಬರೀ ಓದುವುದಲ್ಲ, ಕದ್ದು ಓದುವುದು. ತನ್ನಷ್ಟಕ್ಕೆ ಮಗ್ನಳಾಗಿ ಗಾಡಿಯವನ ಹತ್ತಿರ ಚೌಕಾಸಿ ಮಾಡಿ ತರಕಾರಿ ಕೊಳ್ಳುತ್ತಿರುವ ಸ್ನಿಗ್ಧ ಸುಂದರ ಯುವತಿಯನ್ನು ಕಣ್ಣುಗಳಲ್ಲೇ ಕದ್ದು ಮನೆಗೆ ಒಯ್ದಂತೆ ಕತೆಯೊಂದು ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳನ್ನು ಅವನರಿವಿಲ್ಲದಂತೆ ಅಪಹರಿಸಿಬಿಡುತ್ತದೆ. ವ್ಯಕ್ತಿಯನ್ನು ಅಪಹರಿಸದೆ ಕತೆ ಹುಟ್ಟುವುದಿಲ್ಲವಾಗಿ 'ಯಾರದ್ದೋ ಡೈರಿ ಓದಿದೆ ಮಾರಾಯಾ' ಎಂದು ನೀವು ನನ್ನ ಕಿವಿಯಲ್ಲಿ ಪಿಸುಗುಟ್ಟಿದರೆ ನಾನು ಕಣಜದಿಂದ ಕಚ್ಚಿಸಿಕೊಂಡ ನಾಜೂಕುಮನುಷ್ಯನಂತೆ ನೋವಿನಲ್ಲಿ ನರಳುವುದಿಲ್ಲ. ಆದರೆ, ನೀವು ಓದಿದ್ದು ನನ್ನ ಡೈರಿಯನ್ನೇ ಎಂದು ತಿಳಿದರೆ ಅದನ್ನು ಹೇಗೆ ತೆಗೆದು ಕೊಳ್ಳುತ್ತೇನೋ ಗೊತ್ತಿಲ್ಲ. ಅಪಹೃತವಾಗುವುದು ಬೇರೆ, ಅಪಹರಿಸುವುದು ಬೇರೆ, ಮತ್ತು ಅಪಹರಣದ ಕತೆ ಕೇಳುವುದು ಬೇರೆ. ನೀವು ನಾನೇ ಆಗದಿದ್ದರೆ- ಅಂದರೆ ಸಂದೀಪ ಎನ್ನುವ ಹೆಸರಿನ; ನಲ್ವತ್ತು ವರ್ಷಗಳ ವಯಸ್ಸಿನ; ಐದು ಅಡಿ ಹತ್ತು ಇಂಚು ಎತ್ತರದ ಮತ್ತು ನಾನೇ ವಿಲಕ್ಷಣವೆಂದು ಬಗೆಯುವ ಗುಣಗಳ ವ್ಯಕ್ತಿಯಾಗದಿದ್ದರೆ, ಹಾಗೂ ಈ ಡೈರಿಯು ನಿಮಗೆ ಬಸ್ಸಿನ ಸೀಟಿನ ಮೇಲೋ, ರೈಲಿನ ಅಪ್ಪ‌ ಬರ್ತಿನಲ್ಲೋ, ವಿಮಾನದ ಸೀಟ್ ಪಾಕೇಟಿನಲ್ಲೋ ಅನಾಥವಾಗಿ ಸಿಕ್ಕಿರದಿದ್ದರೆ, ಬಹುಶಃ ನಿಮಗೆ ನಾನೇ ಓದಲು ಕೊಟ್ಟಿರಬೇಕು. ಇದು ಕತೆ ಎಂದು ಹೇಳಿ ನಂಬಿಸಿ ಕೊಟ್ಟಿರಬಹುದು. ಹಾಗಿದ್ದರೆ ಪರವಾಗಿಲ್ಲ, ಮುಂದೆ ಓದಿ. ಮತ್ತೇನು ಮಾಡಬಲ್ಲಿರಿ ನೀವು. 

About the Author

ಎಂ.ಆರ್‌. ದತ್ತಾತ್ರಿ

ಕಾದಂಬರಿಕಾರ, ಕವಿ, ಅಂಕಣಕಾರ, ಮತ್ತು ಅನುವಾದಕರಾಗಿ ಎಂ ಆರ್ ದತ್ತಾತ್ರಿ ಯವರು ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮೂಲದ ಊರು ಚಿಕ್ಕಮಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಇಂಜಿನಿಯ ರಿಂಗ್ ಪದವಿ ಪಡೆದು ಕೆಜಿಎಫ್, ಪುಣೆ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಾಸ್ ಏಂಜಲಿಸ್ ನಗರಗಳಲ್ಲಿ ವೃತ್ತಿ ಜೀವನ ನಡೆಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಸಾಧನೆಗಳ ಕೀರ್ತಿ ದತ್ತಾತ್ರಿಯವರದ್ದಾಗಿದೆ. ಇಆರ್‌ಪಿ ಕ್ಲೌಡ್ ಟೆಕ್ನಾಲಜಿ ಕ್ಷೇತ್ರದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೆಲಸ ಮಾಡಿದ ಅನುಭವವು ಅವರದ್ದು. ಅಮೆರಿಕ ಮತ್ತು ಭಾರತದ ಅನೇಕ ...

READ MORE

Related Books