ಕನ್ನಡದ ವಿಭಿನ್ನ ಲೇಖಕ ವಿಶುಕುಮಾರ್ ಅವರ ಪ್ರಸಿದ್ಧ ಕಾದಂಬರಿ ಕರಾವಳಿ. ಕರಾವಳಿಯ ಕೋಮುದ್ವೇಷ ಮತ್ತು ನವಿರು ಪ್ರೇಮದ ಕಥಾಹಂದರವನ್ನು ಹೊಂದಿರುವ ಈ ಕಾದಂಬರಿ, ಎಬ್ಬಿಸಿದ ತಲ್ಲಣಗಳು ಅಷ್ಟಿಷ್ಟಲ್ಲ. ಕರಾವಳಿಯ ಮೊಗವೀರ ಕುಟುಂಬದ ಹುಡುಗಿ, ಅನ್ಯಕೋಮಿನ (ಮುಸ್ಲಿಂ) ಯುವಕನೊಂದಿಗೆ ಪ್ರೇಮಕ್ಕೆ ಸಿಲುಕಿ, ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಅವನೊಂದಿಗೆ ವಿವಾಹವಾಗುವ ಕತೆ -ಕರಾವಳಿ. ಕೋಮುದ್ವೇಷದ ಅನಾವರಣದೊಂದಿಗೆ ಸಾಗುವ ಕಥೆ ನಿಜಕ್ಕೂ ಕರಾವಳಿಯಲ್ಲಿ ವಿಚಿತ್ರ ವಾತಾವರಣ ನಿರ್ಮಿಸಿತ್ತು. ಇದು ವಿಶುಕುಮಾರ್ ಅವರ ಅತ್ಯಂತ ಪ್ರಸಿದ್ಧ ಕಾದಂಬರಿ.
ಲೇಖಕ ವಿಶುಕುಮಾರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. (15-06-1935) ಮಂಗಳೂರಿನ ಹಿಂದುಳಿದ ಪಂಗಡದಲ್ಲಿ ಜನಿಸಿದ್ದು, ಸಾಹಿತ್ಯ, ಸಿನಿಮಾ, ನಾಟಕ, ರಾಜಕೀಯ, ಪತ್ರಿಕೋದ್ಯಮ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡಿದ್ದರು. ತಂದೆ ದೋಗ್ರ ಪೂಜಾರಿ, ತಾಯಿ ಚಂದ್ರಾವತಿ. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣ ಹಾಗೂ ಪ್ರೌಢಶಿಕ್ಷಣ ಪೂರೈಸಿ, ನಂತರ ಮುಜರಾಯಿ ಇಲಾಖೆ ಸೇರಿದಂತೆ ಹಲವಾರು ಸರಕಾರಿ ಉದ್ಯೋಗದಲ್ಲಿ ಕಾರ‍್ಯನಿರ್ವಹಿಸಿದ್ದಾರೆ. ಸ್ವಯಂ ನಿವೃತ್ತಿ ಪಡೆದಿದ್ದಾರೆ. ಶಾಲಾದಿನಗಳಿಂದಲೇ ಕತೆ, ಕವನ, ನಾಟಕಗಳನ್ನು ರಚಿಸುತ್ತಿದ್ದರು. ವಿದ್ಯಾರ್ಥಿದಿನಗಳಲ್ಲೇ ಅವರ ಹಲವಾರು ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಹಿಂದು – ಮುಸ್ಲಿಂ ಪ್ರೇಮದ ವಿಚಾರವನ್ನು ಹಿನ್ನಲೆಯಾಗಿಟ್ಟು ರಚಿಸಿದ ಅವರ ಕಾದಂಬರಿ -ಕರಾವಳಿ, ಕನ್ನಡ ಪ್ರಭ ಪತ್ರಿಕೆಯಲ್ಲಿ ...
READ MORE