'ನಿಮ್ಮಿ ಮತ್ತು ಬಸು’ ಕೇಶವ ಕುಡ್ಲ ಅವರ ಕಾದಂಬರಿಯಾಗಿದೆ. ನೀಳ್ಗತೆಯೂ ಅಲ್ಲ, ನಿಜಕ್ಕೂ ಬರೆಯಲು ಹೊರಟದ್ದೇನೋ ಒಂದು ಸಣ್ಣ ಕಥೆಯನ್ನು. ಆದರೆ ಅದು ದೀರ್ಘವಾಗುತ್ತ ಸಣ್ಣ ಕಥೆಯ ಪರಿಧಿಯನ್ನು ದಾಟಿದೆ ಅನ್ನಿಸಿದಾಗ ಇದನ್ನೊಂದು ಕಾದಂಬರಿ ಮಾಡಬಾರದೇಕೆ ಎನ್ನಿಸಿತು. ನಾನೆ ಒಪ್ಪಿಕೊಳ್ಳುವಂತೆ ನನ್ನ ಮಾಧ್ಯಮ ಸಣ್ಣ ಕಥೆ ಮಾತ್ರ. ಅದರಲ್ಲೆ ವಸ್ತು ವಿಷಯಗಳಲ್ಲಿ ವೈವಿಧ್ಯತೆಯನ್ನು ತರಲು ಪ್ರಯತ್ನಿಸುತ್ತ ಕಥೆಗಳನ್ನು ಬರೆಯುತ್ತಿದ್ದೇನೆ. ಅವನ್ನೆಲ್ಲ ನಮ್ಮ ಕನ್ನಡ ಪತ್ರಿಕೆಗಳ ಸಂಪಾದಕರು ಪ್ರೀತಿಯಿಂದ ಪ್ರಕಟಿಸಿದ್ದಾರೆ. ನಂತರ ಅವೆಲ್ಲ ಸಂಕಲನದ ರೂಪದಲ್ಲಿ ಬಂದಾಗಲೂ ಓದುಗರು ಉತ್ತಮ ರೀತಿಯಲ್ಲಿ. ಪ್ರತಿಕ್ರಿಯಿಸಿದ್ದಾರೆ. ಹಾಗಾಗಿ ನಾನೂ ಒಬ್ಬ ಕಥೆಗಾರನಾಗಿ ಮುಂದುವರೆಯಬಹುದು ಎನ್ನುವ ಧೈರ್ಯ ಬಂದಿದೆ. ಅದರ ಮುಂದುವರಿಕೆ ಈ ಕಾದಂಬರಿ ನಿಮ್ಮಿ ಮತ್ತು ಬಸು.
ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...
READ MORE