’ಅಂತಿಮ ತೀರ್ಪು’ ಇದು ಎಂ.ವಿ.ಷಡಕ್ಷರಿ ಅವರ ಕೃತಿಯಾಗಿದ್ದು, ಈ ಕೃತಿ ನಮ್ಮ ಜೀವನದಲ್ಲಿ ನಿತ್ಯ ನಡೆಯುವ ಘಟನೆಗಳ ಆಧಾರದಲ್ಲಿ ರಚಿತವಾಗಿದೆ ಮತ್ತು ನಾವು ಹೇಗೆ ಎಚ್ಚರಿಕೆಯಿಂದ ಬದುಕಬೇಕು ಎಂಬುದನ್ನು ತೋರಿಸುತ್ತದೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನೇಕ ವಿಷಯಗಳ ಬಗೆಗಿನ ಸತ್ಯಾಸತ್ಯತೆಯನ್ನು ಪರೋಕ್ಷವಾಗಿ ಈ ಕೃತಿಯ ಮೂಲಕ ತಿಳಿಸಿದ್ದಾರೆ. ತಪ್ಪು ಮಾಡದೆ ಶಿಕ್ಷೆ ಅನುಭವಿಸುವ ಸಂದರ್ಭಗಳು ಜೀವನದಲ್ಲಿ ಎದುರಾಗಿರುತ್ತವೆ. ಅವುಗಳ ಎಳೆಗಳನ್ನು ಬಹಳ ತೀಕ್ಷ್ಮವಾಗಿ ಇಲ್ಲಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಅದರಿಂದ ಈ ಕೃತಿ ಜೀವನಕ್ಕೆ ಇನ್ನಷ್ಟು ಹತ್ತಿರವಾಗುತ್ತದೆ.
ಎಂ.ವಿ ಷಡಕ್ಷರಿ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮುದ್ದೇನಹಳ್ಳಿಯವರು. ತಂದೆ ವಿರೂಪಾಕ್ಷಯ್ಯ, ತಾಯಿ ಹೇಮಲತಾ. ಬಾಲ್ಯದಿಂದಲೇ ಸಾಹಿತ್ಯದ ಬಗ್ಗೆ ಪ್ರೀತಿ ಮತ್ತು ಆಸಕ್ತಿಯನ್ನು ಹೊಂದಿದ್ದು, ಕಳೆದ ಹತ್ತು ವರ್ಷಗಳಿಂದ ತಮ್ಮದೇ ಆದ ಶೈಲಿಯಲ್ಲಿ ಸಾಹಿತ್ಯ ಸೇವೆಯನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಜೊತೆಗೆ, ತಮ್ಮ ಸಾಹಿತ್ಯಾಭಿರುಚಿಯಿಂದ ಪ್ರೇರಿತರಾಗಿ “ನಾನು ಮತ್ತು ನಾನು” (ಕವನ ಸಂಕಲನ), “ಮುಂಗಾರು” (ಕವನ ಸಂಕಲನ), “ಶೃಂಗಾರ” (ಭಾವಗೀತೆಗಳ ಸಂಕಲನ), “ಅಂತಿಮ ತೀರ್ಪು” (ಕಾದಂಬರಿ), “ಉದಾಸೀನ” (ಕಥಾ ಸಂಕಲನ), ಹಾಗೂ "ಮೌನ ಮಾತಾದಾಗ” ಎಂಬ ಕೃತಿಗಳನ್ನು ಹೊರತಂದಿದ್ದಾರೆ. ಈವರೆಗೂ ಅವರು 100ಕ್ಕೂ ಹೆಚ್ಚು ಭಾವಗೀತೆಗಳನ್ನು ರಚಿಸಿದ್ದು, ಸುಮಾರು 35ಕ್ಕೂ ಹೆಚ್ಚು ಭಾವಗೀತೆಗಳು ಸಂಯೋಜನೆಗೆ ಒಳಪಟ್ಟಿವೆ. ಖ್ಯಾತ ಸಂಗೀತ ...
READ MORE